ಶಿವಮೊಗ್ಗ: ಬರಗಾಲ ಬಂದಾಗ ಅಲ್ಲೂಹುವನ್ನು ಪ್ರಾರ್ಥಿಸಿದರೆ ಮಳೆ ಸುರಿಯುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಮುಸ್ಲೀಮರು ನಮಾಜ್ ಮಾಡಿದರು.
ಮಲೆನಾಡಿನಲ್ಲಿ ಈ ವೇಳೆಗಾಗಲೇ ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದವು. ಆದರೆ ಜೂನ್ ಮುಗಿಯುತ್ತಾ ಬಂದರೂ ಮಳೆಯ ಸುಳಿವಿಲ್ಲ. ಇದರಿಂದ ಮಳೆ ಸಕಾಲದಲ್ಲಿ ಸುರಿದು ಜನ, ಜಾನುವಾರುಗಳಿಗೆ ನೀರು ಸಿಗಲಿ ಎಂದು ಶಿವಮೊಗ್ಗದ ಮಂಡ್ಲಿಯ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ವೇಳೆ ದನಗಳನ್ನು ತಂದು ನಮಾಜ್ ಮಾಡಲಾಯಿತು. ನಮಾಜ್ ಮಾಡುತ್ತಿದ್ದಂತೆಯೇ ಹನಿ ಹನಿ ಮಳೆ ಬರಲು ಶುರುವಾಯಿತು. ನಮಾಜ್ ವೇಳೆ ಮುಸ್ಲಿಂ ಬಾಂಧವರು ತಮ್ಮ ಕೈಗಳನ್ನು ಭೂಮಿಯ ಕಡೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಮಳೆಯಾಗಲಿ ಎಂದು ಅಲ್ಲಾಹುವಿನಲ್ಲಿ ಬೇಡಿಕೊಂಡು ನಮಾಜ್ ಮಾಡಿದ್ದೇವೆ. ನಮ್ಮ ಪ್ರಾರ್ಥನೆ ಮನ್ನಿಸಿ ಅಲ್ಲಾ ಮಳೆ ನೀಡುತ್ತಾನೆ ಎಂದು ಮಂಡ್ಲಿ ಮಸೀದಿಯ ಮೌಲ್ವಿ ನಯಾಜ್ ಹೇಳಿದರು.