ETV Bharat / state

ಇಸ್ಲಾಂನಲ್ಲಿ ಮೂರ್ತಿಪೂಜೆಯೇ ಇಲ್ಲ.. ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ಮಿಸಿದರೆ ಮುಸ್ಲಿಮರ ಬಂಡೆಳ್ತಾರೆ: ಮುತಾಲಿಕ್ ಆಕ್ಷೇಪ - ಚಲೋ ಮೈಸೂರು ಕರೆ

ಶಾಸಕ‌ ತನ್ವೀರ್ ಶೇಠ್ ಮೈಸೂರಿನಲ್ಲಿ ಟಿಪ್ಪು ಮೂರ್ತಿ ಮಾಡ್ತೀವಿ ಎನ್ನುವ ವಿಚಾರವನ್ನು ಮುಸ್ಲಿಮರು ವಿರೋಧಿಸಬೇಕು. ಟಿಪ್ಪು ಪ್ರತಿಮೆ ಪ್ರತಿಷ್ಟಾಪನೆಗೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ಷೇಪ

Pramod Muthalik visits Shimoga's Mahaveera Goshale
ಶಿವಮೊಗ್ಗದ ಮಹಾವೀರ ಗೋಶಾಲೆಗೆ ಪ್ರಮೋದ್ ಮುತಾಲಿಕ್ ಭೇಟಿ
author img

By

Published : Nov 12, 2022, 5:11 PM IST

ಶಿವಮೊಗ್ಗ: ಶಾಸಕ‌ ತನ್ವೀರ್ ಶೇಠ್ ಮೈಸೂರಿನಲ್ಲಿ ಟಿಪ್ಪು ಮೂರ್ತಿ ಮಾಡ್ತೀವಿ ಎನ್ನುವ ವಿಚಾರವನ್ನು ಮುಸ್ಲಿಂರು ವಿರೋಧಿಸಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

ಶಿವಮೊಗ್ಗದ ಮಹಾವೀರ ಗೋಶಾಲೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮೂರ್ತಿ ಪ್ರತಿಷ್ಟಾಪನೆಗೆ ನಮ್ಮ ವಿರೋಧವಿದೆ. ಇಸ್ಲಾಂ ನಲ್ಲಿ ಮೂರ್ತಿ ಆರಾಧನೆಗೆ ಅವಕಾಶವಿಲ್ಲ. ಅಲ್ಲಾಹು ಒಬ್ಬನೆ ದೇವರು, ಉಳಿದವರು ಕಾಫೀರರು ಎನ್ನುವ ಮುಸ್ಲಿಂರಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಅಲ್ಲಾಹ ಹಾಗೂ ಮಹಮ್ಕದ್ ಪೈಗಂಬರ್ ರವರ ಮೂರ್ತಿನೆ ಇಲ್ಲ. ತನ್ಬಿರ್ ಶೇಠ್ ವಿರುದ್ದ ಮುಸ್ಲಿಂರೇ ಪತ್ವಾ ಹೊರಡಿಸಿ, ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಮೋದ್ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಟಿಪ್ಪು ಮತಾಂಧ ಕನ್ಜಡ ವಿರೋಧಿ:
ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ ಹಾಗೂ ಕನ್ನಡ ವಿರೋಧಿಯಾಗಿದ್ದ. ಸಾವಿರಾರು ದೇವಾಲಯ ದ್ವಂಸಗೊಳಿಸಿ ಮಸೀದಿ ನಿರ್ಮಾಣ ಮಾಡಿದ ಧೂರ್ತ. ಲಕ್ಷಾಂತರ ಹಿಂದೂಗಳನ್ನು ಕ್ರೌರ್ಯದಿಂದ ಮೋಸದಿಂದ ಮತಾಂತರ ಮಾಡಿದ ವ್ಯಕ್ತಿ ಎಂದು ಆಪಾದಿಸಿದರು.

ಪ್ರತಿಮೆ ಸ್ವಂತ ಜಾಗದಲ್ಲಿ ನಿರ್ಮಿಸಿದ್ರೂ ಬಿಡಲ್ಲ: ಮೋಸದಿಂದ ಮೈಸೂರು ಮಹಾರಾಜ, ಮಹಾರಾಣಿ ಅವರನ್ನು ಬಂಧನಲ್ಲಿಟ್ಟು ಮೈಸೂರು ಸಾಮ್ರಾಜ್ಯವನ್ನು ಹಾಳು ಮಾಡಿದ್ದ. ಪ್ರತಿಮೆ ನಿರ್ಮಾಣದ ವಿರುದ್ದ ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಹೋರಾಟ ಮಾಡುತ್ತೇವೆ ಎಂದರು. ಹಠದಿಂದ ಸ್ವಂತ ಜಾಗದಲ್ಲಿ ಕಟ್ಟುತ್ತೆವೆ ಅಂದ್ರು ಬಿಡಲ್ಲ. ನಿಮ್ಮದು ಅಂತ ಸ್ವಂತ ಜಾಗ ಯಾವುದು ಇಲ್ಲ. ಎಲ್ಲ ಈ ದೇಶಕ್ಕೆ ಸೇರಿದ್ದು ಎಂದು ಆಕ್ಷೇಪಿಸಿದರು.

ಚಲೋ ಮೈಸೂರು ಕರೆ: ಇಂದು ಟಿಪ್ಪು ಪ್ರತಿಮೆಗೆ ಅವಕಾಶ ನೀಡಿದ್ರೆ ನಾಳೆ ಅಕ್ಬರ್, ಔರಂಗಜೇಬ್​ ಪ್ರತಿಮೆ ಕಟ್ಟುತ್ತಿರಾ. ಇಸ್ಲಾಂ ಪ್ರಮುಖರು ಆತ್ಮಸಾಕ್ಷಿಗೆ ಒಪ್ಪುವುದಾದರೆ ನಿಮ್ಮ ಏಕದೇವೋಪಾಸನೆ ಒಪ್ಪಿಲ್ಲ ಅಂದಾಗೆ ಆಗುತ್ತದೆ ಎಂದರು. ನಿಮ್ಮ ತತ್ವ ಸಿದ್ದಾಂತವನ್ನು ತನ್ವಿರ್ ಗಾಳಿಗೆ ತೂರುತ್ತಿದ್ದಾರೆ. ಒಂದು ವೇಳೆ, ನಿರ್ಮಾಣಕ್ಕೆ ಮುಂದಾದರೆ ಚಲೋ ಮೈಸೂರು ಕರೆ ಕೊಡ್ತಿವಿ ಎಂದರು.

ತನ್ವಿರ್ ಸೇಠ್ ವಿರುದ್ದ ಮುಸ್ಲಿಂರು: ಬಾಬರ್​​​​​​ನ ಮಸೀದಿ ದ್ವಂಸ ಮಾಡಿದ ರೀತಿಯಲ್ಲಿ ಟಿಪ್ಪು ಸುಲ್ತಾನ್ ಮೂರ್ತಿಯನ್ನು ಹೊಡೆದು ಹಾಕ್ತಿವಿ. ನೂರಕ್ಕೆ ನೂರು ತನ್ವಿರ್ ಸೇಠ್ ವಿರುದ್ದ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಮರು ಈ ಭಾರಿ ಅವರಿಗೆ ವೋಟ್​​ ಹಾಕುವುದಿಲ್ಲ. ತನ್ವೀರ್ ಸೇಠ್ ಕ್ಷೇತ್ರದಲ್ಲಿ ಈಗ ಎಸ್​​​​ಡಿಪಿಐ ಬೆಳೆದು ನಿಂತಿದೆ.‌

ಹೋದ ಭಾರಿ ತನ್ವೀರ್ ಸೇಠ್ ಅವರನ್ನು ಸೋಲಿಸಲಿದ್ದಾರೆ. ಆಗಾಗಿ ಕಟ್ಟಾರ್ ಮುಸ್ಲಿಂವಾದಿಗಳು, ಕಟ್ಟಾರ್ ಟಿಪ್ಪುವಾದಿಗಳು ಅಂತ ತೋರಿಸುವ ಪ್ರಯತ್ನ ಮಾಡ್ತಾ ಇದ್ದಾರೆ. ಇದಕ್ಕೆ ನಾವಂತೂ ಅವಕಾಶ ನೀಡಲ್ಲ ಎಂದರು.

ಇದನ್ನೂ ಓದಿ: ಟಿಪ್ಪು ಪ್ರತಿಮೆ ಮಾಡುವವರನ್ನು ಬೆಂಬಲಿಸಿದವರನ್ನೂ ಜನ ಮನೆಗೆ ಕಳಿಸುತ್ತಾರೆ : ಪ್ರಹ್ಲಾದ್ ಜೋಶಿ

ಶಿವಮೊಗ್ಗ: ಶಾಸಕ‌ ತನ್ವೀರ್ ಶೇಠ್ ಮೈಸೂರಿನಲ್ಲಿ ಟಿಪ್ಪು ಮೂರ್ತಿ ಮಾಡ್ತೀವಿ ಎನ್ನುವ ವಿಚಾರವನ್ನು ಮುಸ್ಲಿಂರು ವಿರೋಧಿಸಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

ಶಿವಮೊಗ್ಗದ ಮಹಾವೀರ ಗೋಶಾಲೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮೂರ್ತಿ ಪ್ರತಿಷ್ಟಾಪನೆಗೆ ನಮ್ಮ ವಿರೋಧವಿದೆ. ಇಸ್ಲಾಂ ನಲ್ಲಿ ಮೂರ್ತಿ ಆರಾಧನೆಗೆ ಅವಕಾಶವಿಲ್ಲ. ಅಲ್ಲಾಹು ಒಬ್ಬನೆ ದೇವರು, ಉಳಿದವರು ಕಾಫೀರರು ಎನ್ನುವ ಮುಸ್ಲಿಂರಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಅಲ್ಲಾಹ ಹಾಗೂ ಮಹಮ್ಕದ್ ಪೈಗಂಬರ್ ರವರ ಮೂರ್ತಿನೆ ಇಲ್ಲ. ತನ್ಬಿರ್ ಶೇಠ್ ವಿರುದ್ದ ಮುಸ್ಲಿಂರೇ ಪತ್ವಾ ಹೊರಡಿಸಿ, ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಮೋದ್ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಟಿಪ್ಪು ಮತಾಂಧ ಕನ್ಜಡ ವಿರೋಧಿ: ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ ಹಾಗೂ ಕನ್ನಡ ವಿರೋಧಿಯಾಗಿದ್ದ. ಸಾವಿರಾರು ದೇವಾಲಯ ದ್ವಂಸಗೊಳಿಸಿ ಮಸೀದಿ ನಿರ್ಮಾಣ ಮಾಡಿದ ಧೂರ್ತ. ಲಕ್ಷಾಂತರ ಹಿಂದೂಗಳನ್ನು ಕ್ರೌರ್ಯದಿಂದ ಮೋಸದಿಂದ ಮತಾಂತರ ಮಾಡಿದ ವ್ಯಕ್ತಿ ಎಂದು ಆಪಾದಿಸಿದರು.

ಪ್ರತಿಮೆ ಸ್ವಂತ ಜಾಗದಲ್ಲಿ ನಿರ್ಮಿಸಿದ್ರೂ ಬಿಡಲ್ಲ: ಮೋಸದಿಂದ ಮೈಸೂರು ಮಹಾರಾಜ, ಮಹಾರಾಣಿ ಅವರನ್ನು ಬಂಧನಲ್ಲಿಟ್ಟು ಮೈಸೂರು ಸಾಮ್ರಾಜ್ಯವನ್ನು ಹಾಳು ಮಾಡಿದ್ದ. ಪ್ರತಿಮೆ ನಿರ್ಮಾಣದ ವಿರುದ್ದ ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಹೋರಾಟ ಮಾಡುತ್ತೇವೆ ಎಂದರು. ಹಠದಿಂದ ಸ್ವಂತ ಜಾಗದಲ್ಲಿ ಕಟ್ಟುತ್ತೆವೆ ಅಂದ್ರು ಬಿಡಲ್ಲ. ನಿಮ್ಮದು ಅಂತ ಸ್ವಂತ ಜಾಗ ಯಾವುದು ಇಲ್ಲ. ಎಲ್ಲ ಈ ದೇಶಕ್ಕೆ ಸೇರಿದ್ದು ಎಂದು ಆಕ್ಷೇಪಿಸಿದರು.

ಚಲೋ ಮೈಸೂರು ಕರೆ: ಇಂದು ಟಿಪ್ಪು ಪ್ರತಿಮೆಗೆ ಅವಕಾಶ ನೀಡಿದ್ರೆ ನಾಳೆ ಅಕ್ಬರ್, ಔರಂಗಜೇಬ್​ ಪ್ರತಿಮೆ ಕಟ್ಟುತ್ತಿರಾ. ಇಸ್ಲಾಂ ಪ್ರಮುಖರು ಆತ್ಮಸಾಕ್ಷಿಗೆ ಒಪ್ಪುವುದಾದರೆ ನಿಮ್ಮ ಏಕದೇವೋಪಾಸನೆ ಒಪ್ಪಿಲ್ಲ ಅಂದಾಗೆ ಆಗುತ್ತದೆ ಎಂದರು. ನಿಮ್ಮ ತತ್ವ ಸಿದ್ದಾಂತವನ್ನು ತನ್ವಿರ್ ಗಾಳಿಗೆ ತೂರುತ್ತಿದ್ದಾರೆ. ಒಂದು ವೇಳೆ, ನಿರ್ಮಾಣಕ್ಕೆ ಮುಂದಾದರೆ ಚಲೋ ಮೈಸೂರು ಕರೆ ಕೊಡ್ತಿವಿ ಎಂದರು.

ತನ್ವಿರ್ ಸೇಠ್ ವಿರುದ್ದ ಮುಸ್ಲಿಂರು: ಬಾಬರ್​​​​​​ನ ಮಸೀದಿ ದ್ವಂಸ ಮಾಡಿದ ರೀತಿಯಲ್ಲಿ ಟಿಪ್ಪು ಸುಲ್ತಾನ್ ಮೂರ್ತಿಯನ್ನು ಹೊಡೆದು ಹಾಕ್ತಿವಿ. ನೂರಕ್ಕೆ ನೂರು ತನ್ವಿರ್ ಸೇಠ್ ವಿರುದ್ದ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಮರು ಈ ಭಾರಿ ಅವರಿಗೆ ವೋಟ್​​ ಹಾಕುವುದಿಲ್ಲ. ತನ್ವೀರ್ ಸೇಠ್ ಕ್ಷೇತ್ರದಲ್ಲಿ ಈಗ ಎಸ್​​​​ಡಿಪಿಐ ಬೆಳೆದು ನಿಂತಿದೆ.‌

ಹೋದ ಭಾರಿ ತನ್ವೀರ್ ಸೇಠ್ ಅವರನ್ನು ಸೋಲಿಸಲಿದ್ದಾರೆ. ಆಗಾಗಿ ಕಟ್ಟಾರ್ ಮುಸ್ಲಿಂವಾದಿಗಳು, ಕಟ್ಟಾರ್ ಟಿಪ್ಪುವಾದಿಗಳು ಅಂತ ತೋರಿಸುವ ಪ್ರಯತ್ನ ಮಾಡ್ತಾ ಇದ್ದಾರೆ. ಇದಕ್ಕೆ ನಾವಂತೂ ಅವಕಾಶ ನೀಡಲ್ಲ ಎಂದರು.

ಇದನ್ನೂ ಓದಿ: ಟಿಪ್ಪು ಪ್ರತಿಮೆ ಮಾಡುವವರನ್ನು ಬೆಂಬಲಿಸಿದವರನ್ನೂ ಜನ ಮನೆಗೆ ಕಳಿಸುತ್ತಾರೆ : ಪ್ರಹ್ಲಾದ್ ಜೋಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.