ETV Bharat / state

ಆಟಕ್ಕೆ ಸಿದ್ದಗೊಳ್ಳದ ಹೈಟೆಕ್​ ಕ್ರೀಡಾಂಗಣ: ಅನೈತಿಕ ಚಟುವಟಿಕೆಯ ತಾಣ ಈ ಮೈದಾನ!

13 ವರ್ಷಗಳೇ ಕಳೆದರೂ ಇನ್ನೂ ಮುಗಿಯದ ಕ್ರೀಡಾಂಗಣದ ಕಾಮಗಾರಿ, ನೂರಾರು ಕನಸು ಹೊತ್ತ ಕ್ರೀಡಾಪಟುಗಳಿಗೆ ಕನಸಿನ ಮನೆಮಾತಾಗಿ ಉಳಿದ ನಗರದ ಕ್ರೀಡಾಂಗಣ.

13 ವರ್ಷಗಳೆ ಕಳೆದರೂ ಇನ್ನೂ ಮುಗಿಯದ ಕ್ರೀಡಾಂಗಣದ ಕಾಮಗಾರಿ
author img

By

Published : May 3, 2019, 10:23 PM IST

Updated : May 3, 2019, 11:30 PM IST

ಶಿವಮೊಗ್ಗ : ನೂರಾರು ಕ್ರೀಡಾಪಟುಗಳ ಬಾಳಿಗೆ ಬೆಳಕಾಗಬೇಕಾಗಿದ್ದ ಕ್ರೀಡಾಂಗಣ ಸರಿಯಾದ ಕಾಮಗಾರಿ ವ್ಯವಸ್ಥೆ ಕಾಣದೇ, ಶಿಥಿಲಾವಸ್ಥೆಗೆ ತಲುಪಿದೆ. ಈ ಕ್ರೀಡಾಂಗಣದ ಮೇಲೆ ಹಲವಾರು ನಿರೀಕ್ಷೆಗಳಿದ್ದವು. ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತೆ. ಅಲ್ಲಿ ಪ್ರಾಕ್ಟೀಸ್ ಮಾಡಬಹುದು. ಕ್ರೀಡಾಕೂಟ ನಡೆಸಬಹುದೆಂದು ಹತ್ತಾರು ಕನಸು ಕಾಣಲಾಗಿತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಈ ಕ್ರೀಡಾಂಗಣದ ಕಾಮಗಾರಿ ಆರಂಭವಾಗಿದೆ ಹೊರತು, ಮುಗಿಯುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ಸಹ್ಯಾದ್ರಿ ಕಾಲೇಜು ಕ್ಯಾಂಪಸ್​ನ ಈ ಕ್ರೀಡಾಂಗಣ ಕಾಮಗಾರಿ ಆರಂಭದಲ್ಲಿಯೇ, ಸ್ಥಗಿತಗೊಂಡಿದ್ದು, ಸುಮಾರು 8ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಸುಸಜ್ಜಿತವಾಗಿ ನಿರ್ಮಾಣಗೊಂಡರೆ, ಇಂತಹ ಭವ್ಯ ಕ್ರೀಡಾಂಗಣ ಮತ್ತೊಂದಿಲ್ಲ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಬರೋಬ್ಬರಿ 12-13 ವರ್ಷಗಳಿಂದ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ.

ಸಹ್ಯಾದ್ರಿ ಕಾಲೇಜು ಮತ್ತು ಕುವೆಂಪು ವಿವಿ ವತಿಯಿಂದ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಸದ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಲ್ಲಿ ಇಲ್ಲಿ, ನಡೆದಿದ್ದ ಕಾಮಗಾರಿಗಳು ಕೂಡ ಶಿಥಿಲಾವಸ್ಥೆ ತಲುಪುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಕ್ರೀಟಿಕರಣ ಕಾಮಗಾರಿಗಳು, ಬೃಹತ್ ಪೆವಿಲಿಯನ್, ಪ್ರೇಕ್ಷಕರು ಕುಳಿತುಕೊಳ್ಳುವ ಮೆಟ್ಟಿಲುಗಳೆಲ್ಲವೂ ನಿರ್ಮಾಣ ಹಂತದಲ್ಲಿಯೇ ಸ್ಥಗಿತಗೊಳಿಸಲಾಗಿದ್ದು, ಸದ್ಯ ನಾಯಿ, ದನ, ಹಂದಿಗಳ ವಾಸಸ್ಥಾನವಾಗಿ ಮಾರ್ಪಾಡಾಗಿದೆ. ಅಲ್ಲದೇ, ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

13 ವರ್ಷ ಕಳೆದರೂ ಮುಗಿಯದ ಕ್ರೀಡಾಂಗಣದ ಕಾಮಗಾರಿ

2002ರಲ್ಲಿ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಫ್ರೋ. ಹೂವಯ್ಯ ಗೌಡರ ಅವಧಿಯಲ್ಲಿ ಈ ಕ್ರೀಡಾಂಗಣದ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ, ನಂತರದಲ್ಲಿ, 2006 ರಲ್ಲಿ, ಸುಮಾರು 9 ಕೋಟಿ ರೂ. ವೆಚ್ಚದಲ್ಲಿ, ಕ್ರೀಡಾಂಗಣ ಕಾಮಗಾರಿ ಆರಂಭಿಸಲಾಗಿತ್ತು. ಅಂದಿನಿಂದ ಕುಂಟುತ್ತಾ ಸಾಗಿದ ಕಾಮಗಾರಿ, 2012 ರಲ್ಲಿ, ಸೂಕ್ತ ಅನುದಾನವಿಲ್ಲದೆ ನಿಂತೇ ಹೋಗಿದೆ. ಅದರಂತೆ, ನಂತರದ ದಿನಗಳಲ್ಲಿ, ಸರ್ಕಾರ ಬದಲಾದಂತೆ, ಅನುದಾನದ ಕೊರತೆಯುಂಟಾಗಿ, ಇದೀಗ ಈ ಕ್ರೀಡಾಂಗಣ ನಿರ್ಜೀವ ಸ್ಥಿತಿಗೆ ತಲುಪಿದೆ.

ಇರುವ ಮೈದಾನದಲ್ಲಿ, ನೆಟ್ ಹಾಕಿಕೊಂಡು ಸ್ಥಳಿಯ ಕ್ರೀಡಾಪಟುಗಳು ಪ್ರಾಕ್ಟಿಸ್ ಮಾಡುತ್ತಿದ್ದಾರೆಯೇ ಹೊರತು, ಈ ಕ್ರೀಡಾಂಗಣ ಸಂಪೂರ್ಣ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಲಾಗುತ್ತಿಲ್ಲ. ನಗರದ ನೆಹರೂ ಕ್ರೀಡಾಂಗಣವನ್ನೇ ಅವಲಂಬಿಸಿರುವ ನಗರದ ನಾಗರೀಕರಿಗೆ, ಕ್ರೀಡಾಪಟುಗಳಿಗೆ, ಈ ಕ್ರೀಡಾಂಗಣದ ಲಭ್ಯತೆ ಇಲ್ಲದೇ ಇರುವುದು, ಬೇಸರ ಮೂಡಿಸಿದೆ.

Intro:ದಿನಾಂಕ :- 02-05-2019
ಸ್ಥಳ:- ಶಿವಮೊಗ್ಗ.
ಸ್ಲಗ್ :- ಆರಂಭಗೊಂಡು 13 ವರ್ಷ ಕಳೆದರೂ, ಮುಗಿಯುತ್ತಿಲ್ಲ ಈ ಕ್ರೀಡಾಂಗಣದ ಕಾಮಗಾರಿ – ಸರ್ಕಾರದಿಂದ ದೊರೆಯುವುದೇ ಕಾಯಕಲ್ಪ.
ಫಾರ್ಮೆಟ್ :- ಪ್ಯಾಕೇಜ್.

ANCHOR..........
ಈ ಕ್ರೀಡಾಂಗಣದ ಮೇಲೆ ಹಲವಾರು ನಿರೀಕ್ಷೆಗಳಿದ್ದವು. ಶಿವಮೊಗ್ಗದಲ್ಲಿ, ಮತ್ತೊಂದು ಕ್ರೀಡಾಂಗಣ ನಿರ್ಮಾಣವಾಗುತ್ತೆ. ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತೆ. ಒಂದೇ ಕ್ರೀಡಾಂಗಣದ ಮೇಲೆ ಅವಲಂಬಿತರಾಗುವ ಬದಲಾಗಿ ಈ ಕ್ರೀಡಾಂಗಣದಲ್ಲಿಯೂ, ಕ್ರೀಡಾಪಟುಗಳು ಪ್ರಾಕ್ಟೀಸ್ ಮಾಡಬಹುದು. ಇಲ್ಲಿಯೂ ಕೂಡ ವಿವಿಧ ಕ್ರೀಡಾಕೂಟಗಳು ನಡೆಸಬಹುದು. ಹೀಗೆ ಹಲವಾರು ಕನಸುಗಳು ಕಾಣಲಾಗಿತ್ತು. ಆದರೆ, ಫಲಿತಾಂಶ ಮಾತ್ರ ಶೂನ್ಯವಾಗಿದೆ. ಈ ಕ್ರೀಡಾಂಗಣದ ಕಾಮಗಾರಿ ಆರಂಭವಾಗಿದೆ ಹೊರತು, ಮುಗಿಯೋದು ಮಾತ್ರ ಮರಿಚಿಕೆಯಾಗಿದೆ.

V.O. - 1..........
ಸುಮಾರು 8 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣ, ಸಂಪೂರ್ಣವಾಗಿ ಸುಸಜ್ಜಿತವಾಗಿ ನಿರ್ಮಾಣಗೊಂಡರೆ, ಇಂತಹ ಭವ್ಯ ಕ್ರೀಡಾಂಗಣ ಮತ್ತೊಂದಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, ಈಗ ನೀವು ನೋಡ್ತಾ ಇರೋ, ಈ ಕ್ರೀಡಾಂಗಣ, ಬರೋಬ್ಬರಿ 12-13 ವರ್ಷಗಳಿಂದ ಹೀಗೆಯೇ ಇದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಕ್ರೀಡಾಂಗಣ ಕಾಮಗಾರಿ ಆರಂಭದಲ್ಲಿಯೇ, ಸ್ಥಗಿತಗೊಂಡಿದ್ದು, ಇದು ಪೂರ್ಣಗೊಳ್ಳೋದು ಮರಿಚಿಕೆಯಾಗಿದೆ. ಸಹ್ಯಾದ್ರಿ ಕಾಲೇಜು ಮತ್ತು ಕುವೆಂಪು ವಿವಿ ವತಿಯಿಂದ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಈಗಂತೂ ಇದು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅಲ್ಲಿ ಇಲ್ಲಿ, ನಡೆದಿದ್ದ ಕಾಮಗಾರಿಗಳು ಕೂಡ ಶಿಥಿಲವಾಸ್ಥೆ ತಲುಪುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ, ಈ ಕ್ರೀಡಾಂಗಣದಲ್ಲಿ ಸಾಕಷ್ಟು ಕಾಮಗಾರಿಗಳು ನಡೆದಿದ್ದು, ಇವ್ಯಾವೂ ಕೂಡ ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಕ್ರೀಟಿಕರಣ ಕಾಮಗಾರಿಗಳು, ಬೃಹತ್ ಪೆವಿಲಿಯನ್, ಪ್ರೇಕ್ಷಕರು ಕುಳಿತುಕೊಳ್ಳುವ ಮೆಟ್ಟಿಲುಗಳೆಲ್ಲವೂ ನಿರ್ಮಾಣ ಹಂತದಲ್ಲಿಯೇ, ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಕಳೆದ 8-10 ವರ್ಷಗಳಿಂದ ಯಾವುದೇ ಕಾಮಗಾರಿ ಮುಂದುವರೆಯದೇ, ಹಾಗೆಯೇ ಉಳಿದುಕೊಂಡಿದ್ದು, ಇದು ಇದೀಗ ನಾಯಿ, ಬೀಡಾಡಿ ದನಗಳ, ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದೆ. ಅಲ್ಲದೇ, ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪವೂ ಕೂಡ ಕೇಳಿ ಬರುತ್ತಿದ್ದು, ಮದ್ಯದ ಬಾಟಲಿಗಳು, ಸೇರಿದಂತೆ, ಇತರೆ ವಸ್ತುಗಳು ಅಲ್ಲಲ್ಲಿ ಕಂಡು ಬರುತ್ತಿರುವುದು ನೋಡಿದ್ರೆ, ಇಲ್ಲಿ, ಕ್ರೀಡಾಕೂಟದ ಪ್ರಾಕ್ಟಿಸ್ ಗೆ ಬರುವವರು, ಹೆದರಿಕೊಂಡೇ, ಪ್ರಾಕ್ಟಿಸ್ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೈಟ್ – 1 :- ಗಿರೀಶ್, ಸಾಮಾಜಿಕ ಕಾರ್ಯಕರ್ತ

V.O. - 2..........
ಇನ್ನು 2002 ರಲ್ಲಿ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಫ್ರೋ. ಹೂವಯ್ಯ ಗೌಡರ ಅವಧಿಯಲ್ಲಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ, ನಂತರದಲ್ಲಿ, 2006 ರಲ್ಲಿ, ಸುಮಾರು 9 ಕೋಟಿ ರೂ. ವೆಚ್ಚದಲ್ಲಿ, ಕ್ರೀಡಾಂಗಣ ಕಾಮಗಾರಿ ಆರಂಭಿಸಲಾಗಿತ್ತು. ಅಂದಿನಿಂದ ಕುಂಟುತ್ತಾ ಸಾಗಿದ ಕಾಮಗಾರಿ, 2012 ರಲ್ಲಿ, ಸೂಕ್ತ ಅನುದಾನವಿಲ್ಲದೇ, ಅಂದಿನಿಂದ ನಿಂತೇ ಹೋಗಿದೆ. ಅದರಂತೆ, ನಂತರದ ದಿನಗಳಲ್ಲಿ, ಸರ್ಕಾರಗಳು ಬದಲಾದಂತೆ, ಅನುದಾನದ ಕೊರತೆಯುಂಟಾಗಿ, ಇದೀಗ ಈ ಕ್ರೀಡಾಂಗಣ ನಿರ್ಜೀವ ಸ್ಥಿತಿಗೆ ತಲುಪಿದೆ. ಇರುವ ಮೈದಾನದಲ್ಲಿ, ನೆಟ್ ಹಾಕಿಕೊಂಡು ಸ್ಥಳಿಯ ಕ್ರಿಕೆಟ್ ಕ್ರೀಡಾಪಟುಗಳು ಪ್ರಾಕ್ಟಿಸ್ ಮಾಡುತ್ತಿದ್ದಾರೆಯೇ ಹೊರತು, ಈ ಕ್ರೀಡಾಂಗಣ ಸಂಪೂರ್ಣ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಶಿವಮೊಗ್ಗದಲ್ಲಿರುವ ಒಂದೇ ಒಂದು ನೆಹರೂ ಕ್ರೀಡಾಂಗಣವನ್ನೇ ಅವಲಂಭಿಸಿರುವ ನಗರದ ನಾಗರೀಕರಿಗೆ, ಕ್ರೀಡಾಪಟುಗಳಿಗೆ, ಈ ಕ್ರೀಡಾಂಗಣದ ಲಭ್ಯತೆ ಇಲ್ಲದೇ ಇರುವುದು, ಬೇಸರ ಮೂಡಿಸಿದೆ.

ಬೈಟ್ – 2 :- ಚೈತ್ರಾ ವಿದ್ಯಾರ್ಥಿನಿ
ಬೈಟ್ :- 3 ಹೆಚ್ ಎಂ ವಾಗ್ದೇವಿ ಪ್ರಾಶುಪಾಲರು
V.O. – 3..........
ಒಟ್ಟಿನಲ್ಲಿ, ಇತಿಹಾಸವಿರುವ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಜಿಲ್ಲಾಡಳಿತವಾಗಲೀ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಾಗಲೀ, ಈ ಕೂಡಲೇ ಗಮನ ಹರಿಸಬೇಕಿದ್ದು, ಕೂಡಲೇ, ಸೂಕ್ತ ಅನುದಾನ ಬಿಡುಗಡೆಗೊಳಿಸಿ, ಈ ಕ್ರೀಡಾಂಗಣಕ್ಕೆ ಕಾಯಕಲ್ಪ ದೊರೆಯಬೇಕಿದೆ.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
Last Updated : May 3, 2019, 11:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.