ಶಿವಮೊಗ್ಗ: ಮಲೆನಾಡಿನಲ್ಲಿ ಸುರಿದ ಭಾರಿ ಮಳೆಗೆ ಭದ್ರಾ ಜಲಾಶಯ ಭರ್ತಿಯಾಗಿದ್ದು ಸಂಸದ ಬಿ.ವೈ ರಾಘವೇಂದ್ರ ಬಾಗಿನ ಅರ್ಪಿಸಿದರು.
ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದರು, ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೆ 2000 ಕೋಟಿ ವೆಚ್ಚದ ಟೇಂಟರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ರೈತ ನಾಯಕ ಯಡಿಯೂರಪ್ಪ ನವರ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಆಗಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯ ಏಳು ತಾಲ್ಲೂಕು ಹಾಗೂ ಬೈಂದೂರು ತಾಲ್ಲೂಕನ್ನು ಸೇರಿ ಎಂಟು ತಾಲ್ಲೂಕುಗಳಿಗೆ ನೀರಾವರಿ ಯೋಜನೆ ಮಾಡಲು ಹೊರಟಿರುವ ಸರ್ಕಾರಕ್ಕೆ ಅಭಿನಂದಿಸಬೇಕು ಎಂದರು.
ಮಳೆಯಿಂದ ಹಾಳಾದ ಮನೆಗಳನ್ನ ಕಟ್ಟಿಕೊಳ್ಳಲು ಯಡಿಯೂರಪ್ಪ ನೇತೃತ್ವದ ಸರ್ಕಾರ ಐದು ಲಕ್ಷ ರೂಪಾಯಿ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ರೈತರ ಪರವಾಗಿ ಅನೇಕ ಯೋಜನೆಗಳನ್ನ ಜಾರಿಗೆ ತರುತ್ತಿದೆ ಅದರ ಜೊತೆಗೆ ನರೇಂದ್ರ ಮೋದಿಯವರ ಕೃಷಿ ಸನ್ಮಾನ ಯೋಜನೆ ಅಡಿಯಲ್ಲಿ 6000 ಹಾಗೂ ರಾಜ್ಯ ಸರ್ಕಾರ 2000 ನೀಡುತ್ತಿದೆ.ಎಂದರು. ಬರುವಂತಹ ದಿನಗಳಲ್ಲಿ ರಾಜ್ಯದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಬಿ.ವೈ.ಆರ್, ಈ ಬಾರಿ ವರುಣ ದೇವನ ಆಶೀರ್ವಾದದಿಂದ ಮಳೆ ಚೆನ್ನಾಗಿ ಆಗಿದೆ. ಒಂದು ಕಡೆ ನೆರೆಹಾವಳಿ, ಇನ್ನೊಂದು ಕಡೆ ಬರಗಾಲ ಎದುರಿಸುತ್ತಿದ್ದೆವೆ. ಆದರೆ, ಇಂತಹ ಸಂದರ್ಭದಲ್ಲಿ ನಮ್ಮ ಭದ್ರಾ ಜಲಾಶಯ 78 ಟಿಎಂಸಿ ನೀರು ಶೇಖರಣೆ ಮಾಡುವ ಡೊಡ್ಡ ಜಲಾಶಯ. ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಿಗೆ ಕೂಡ 2 ಲಕ್ಷ ಎಕರೆ ಭೂಮಿ ಗೆ ನೀರಾವರಿ ಒದಗಿಸುವ ಜಲಾಶಯ ಇದು ಎಂದರು.