ಶಿವಮೊಗ್ಗ: ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಲೈನ್ಮ್ಯಾನ್ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿ ಬಳಿಕ ವಿಷ ಕುಡಿಯಲು ಯತ್ನಿಸಿದ ಘಟನೆ ಶಿವಮೊಗ್ಗದ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗ ನಡೆದಿದೆ.
ಲೈನ್ಮ್ಯಾನ್ ತಿರುಮಲೇಶ್ ವಿಷ ಸೇವನೆಗೆ ಮುಂದಾದವರು. ಮೆಸ್ಕಾಂನ ಹಿರಿಯ ಅಧಿಕಾರಿ ಹನುಮಂತಪ್ಪ ಎಂಬುವರು ದಿನಾಲೂ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ತಿರುಮಲೇಶ್ ವಿಷ ಸೇವನೆಗೆ ಮುಂದಾಗಿದ್ದಾರೆ. ವಿಷ ಸೇವಿಸಲು ನನಗೆ ಅನುಮತಿ ಕೊಡಿ. ಇಲ್ಲವಾದರೆ ದಯಾಮರಣ ನೀಡಿ ಎಂದು ಅವರು ಒತ್ತಾಯಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಜಯನಗರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಇತರರು ತಿರುಮಲೇಶನ ಮನವೊಲಿಸಿ, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.