ETV Bharat / state

ಏನೂ ಗೊತ್ತಿಲ್ಲದೇ ಶಾಸಕರಾಗಿದ್ದಾರೆ, ಜನ ಬುದ್ಧಿ ಕಲಿಸುತ್ತಾರೆ : ಶಾಸಕ ಗಣೇಶ್​ ವಿರುದ್ಧ ಸಚಿವ ಕೆಎಸ್​ಈ ವಾಗ್ದಾಳಿ

ಅವರ ನಾಯಕರು ಸಿದ್ದರಾಮಯ್ಯ ಫೈನಾನ್ಸ್ ಮಿನಿಸ್ಟರ್ ಆಗಿದ್ದರು. ಆ ರೀತಿ ಹಣ ಬಿಡುಗಡೆ ಮಾಡುವುದಕ್ಕೆ ಬರುತ್ತಾ ಅಂತ ಕೇಳಿಕೊಳ್ಳಲಿ..

k s eshwarappa
ಸಚಿವ ಕೆ ಎಸ್​ ಈಶ್ವರಪ್ಪ
author img

By

Published : Jun 25, 2021, 5:24 PM IST

ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ರಸ್ತೆಗಳ ಅಭಿವೃದ್ಧಿಗೆ 1,200 ಕೋಟಿ ರೂ. ಹಣವನ್ನು ಮುಖ್ಯಮಂತ್ರಿಗಳು ನೇರವಾಗಿ ಶಾಸಕರಿಗೆ ಕೊಟ್ಟಿದ್ದರು. ಈ ರೀತಿ ಹಣವನ್ನು ಶಾಸಕರಿಗೆ ಕೊಡಲು ಬರುವುದಿಲ್ಲ ಅಂತ ತಿಳಿಸಿದ್ದೆ. ಸಿಎಂ ಹಾಗೂ ರಾಜ್ಯಪಾಲರಿಗೂ ಸಹ ಪತ್ರವನ್ನು ಬರೆದಿದ್ದೆ.

ಇದೀಗ ಮುಖ್ಯಮಂತ್ರಿ ಅವರು ಆ ಆದೇಶ ಹಿಂಪಡೆದುಕೊಂಡು ಇಂದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹಣವನ್ನು ನೀಡಿದ್ದಾರೆ ಎಂದು ಸಚಿವ ಕೆ ಎಸ್​ ಈಶ್ವರಪ್ಪ ತಿಳಿಸಿದ್ದಾರೆ.

ಕಂಪ್ಲಿ ಕಾಂಗ್ರೆಸ್‌ ಶಾಸಕ ಗಣೇಶ್ ವಿರುದ್ಧ ಸಚಿವ ಕೆ ಎಸ್​ ಈಶ್ವರಪ್ಪ ವಾಗ್ದಾಳಿ ನಡೆಸಿರುವುದು..

ಶಾಸಕ ಗಣೇಶ್ ಅವರಿಗೆ ಈ ಹಿಂದೆ ಹಲವು ಕೆಲಸ ಮಾಡಿ ಕೊಟ್ಟಿದ್ದೇನೆ. ಆಗ ಎಷ್ಟೆಷ್ಟು ಕಮೀಷನ್ ಕೊಟ್ಟಿದ್ದಾರೆ ಅಂತ ತಿಳಿಸಲಿ. ಅದನ್ನು ಬಹಿರಂಗ ಮಾಡಲಿ ಎಂದು ಕಿಡಿ ಕಾರಿದರು. ಅವರ ನಾಯಕರು ಸಿದ್ದರಾಮಯ್ಯ ಫೈನಾನ್ಸ್ ಮಿನಿಸ್ಟರ್ ಆಗಿದ್ದರು.

ಆ ರೀತಿ ಹಣ ಬಿಡುಗಡೆ ಮಾಡುವುದಕ್ಕೆ ಬರುತ್ತಾ ಅಂತ ಕೇಳಿಕೊಳ್ಳಲಿ. ಏನೂ ಗೊತ್ತಿಲ್ಲದೇ ಶಾಸಕರಾಗಿದ್ದಾರೆ. ಇಂತಹ ಶಾಸಕರಿಗೆ ಜನ ಯಾವ ಸಂದರ್ಭದಲ್ಲಿ ಬುದ್ಧಿ ಕಲಿಸಬೇಕೋ ಆ ಸಂದರ್ಭದಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಯಾರೂ ಸನ್ಯಾಸಿ ಅಲ್ಲ, ರಮೇಶ್​ ಸಚಿವರಾಗೋದಕ್ಕೆ ಪ್ರಯತ್ನಪಟ್ಟರೆ ತಪ್ಪೇನು? : ಸಚಿವ ಕೆ ಎಸ್‌ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.