ಶಿವಮೊಗ್ಗ:ಆಯನೂರ್ ಮಂಜುನಾಥ್ ಡಿಕೆ ಶಿವಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನ ಕೆಪಿಸಿಸಿ ಖಂಡಿಸುತ್ತದೆ ಎಂದು ಕಾರ್ಯದರ್ಶಿ ಕೆ .ದೇವೇಂದ್ರಪ್ಪ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಡಿಕೆ ಶಿವಕುಮಾರ್ ಅವರ ಬಗ್ಗೆ ಆಯನೂರು ಮಂಜುನಾಥ್ ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ. ನೂರು ಶಿವಕುಮಾರ್ ಬಂದರು ಏನೂ ಮಾಡಲಾಗುವುದಿಲ್ಲ ಎಂದಿದ್ದಾರೆ. ಆದರೆ, ನೂರು ಶಿವಕುಮಾರ್ ಇಲ್ಲ, ಒಬ್ಬರೇ ಇರುವುದು. ಶಿವಮೊಗ್ಗ ಕ್ಷೇತ್ರದಲ್ಲಿ ತಲ್ಲಣ ಗೊಳಿಸಲು ಮತ್ತು ಬಿಜೆಪಿಯನ್ನು ಸೋಲಿಸಲು ಡಿ.ಕೆಶಿವಕುಮಾರ್ ಪ್ರಯತ್ನ ಸಾಕು. ಡಿ ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಅವರು ಚುನಾವಣೆಯ ಜವಾಬ್ದಾರಿ ಹೊತ್ತುಕೊಂಡಿದ್ದು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಚುನಾವಣೆ ನಡೆಸುತ್ತಾರೆ.
ಜಿಲ್ಲೆಯಲ್ಲಿ ಬಿಜೆಪಿಯವರಿಗೆ ಡಿಕೆ ಶಿವಕುಮಾರ್ ಬರುತ್ತಾರೆ ಎಂದು ಭಯವಾಗಿದೆ. ಆದ್ದರಿಂದಲೇ ವಿನಾಕಾರಣ ಏನೇನೋ ಮಾತನಾಡಿ ತಮ್ಮ ನಾಲಿಗೆಯನ್ನು ಹೊಲಸು ಮಾಡಿಕೊಳ್ಳುತ್ತಿದ್ದಾರೆ. ಆಯನೂರ್ ಮಂಜುನಾಥ್ ಪಕ್ಷಾಂತರಿ. ಮೂರು ಪಕ್ಷಗಳನ್ನ ಸುತ್ತಿ ಬಂದವರು. ಇವೆಲ್ಲವನ್ನೂ ಜನ ಮರೆತಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ವಿಜಯಲಕ್ಷ್ಮಿ ಸಿ ಪಾಟೀಲ್ ,ಕವಿತಾ ರಾಘವೇಂದ್ರ ,ಶಿವಕುಮಾರ್ ,ಚಂದ್ರಶೇಖರ್ ,ಉಪಸ್ಥಿತರಿದ್ದರು.