ETV Bharat / state

ನಾನು ಬಾಂಬೆ ಬಾಯ್ಸ್ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ: ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ

author img

By

Published : Jun 28, 2023, 3:37 PM IST

ನಮ್ಮದು ಶಿಸ್ತಿನ ಪಕ್ಷ. ನಾವು ಅಶಿಸ್ತು ಸಹಿಸುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ

ಶಿವಮೊಗ್ಗ: ನಾನು ಬಾಂಬೆ ಬಾಯ್ಸ್ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ ನೀಡಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ‌ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನು ಬಾಂಬೆ ಬಾಯ್ಸ್ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಆದರೆ ಮಾಧ್ಯಮದಲ್ಲಿ ಬಾಂಬೆ ಬಾಯ್ಸ್ ಬಗ್ಗೆ ಗರಂ ಅಂತ ಬಂದಿತ್ತು. ಇದರಿಂದ ಬಿಜೆಪಿಗೆ ಬಂದ ಅನೇಕ ನಮ್ಮ ಗೆಳೆಯರಿಗೆ ನೋವಾಯಿತು. ನನಗೂ ನೋವಾಯಿತು. ಅವರಿಂದ ಸರ್ಕಾರ ಬಂತು. ನಾನು ಮಂತ್ರಿಯಾದೆ. ಈ ಘಟನೆಯ ಬಗ್ಗೆ ರಾಜ್ಯಾಧ್ಯಕ್ಷರ ಬಳಿ ಮಾತನಾಡಿದ್ದೇನೆ ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 7 ತಂಡಗಳಲ್ಲಿ ಪ್ರವಾಸ ಮಾಡಿದ್ದೇವೆ. ಲೋಕಸಭಾ ಚುನಾವಣೆ, ಜಿ.ಪಂ., ತಾ. ಪಂ ಚುನಾವಣೆಯ ಬಗ್ಗೆ ಚರ್ಚಿಸಲಾಗಿದೆ. ಐದು ಗ್ಯಾರಂಟಿ ಜಾರಿ ವಿಳಂಬ ಮಾಡುತ್ತಿರುವ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ. ಎಲ್ಲ ಕಡೆ ನಡೆಸಿದ ನಮ್ಮ ಸಭೆಗಳಲ್ಲಿ ಕೆಲವೊಂದು ಕಡೆ ಮಾತ್ರ ಸಣ್ಣಪುಟ್ಟ ಘಟನೆಗಳು ನಡೆದಿವೆ ಬಿಟ್ಟರೆ, ಉಳಿದೆಡೆ ಸಭೆಗಳು ಚೆನ್ನಾಗಿಯೇ ನಡೆದಿದೆ ಎಂದು ತಿಳಿಸಿದರು.

'ಸದನ ನಡೆಸಲು ಬಿಡುವುದಿಲ್ಲ': ಗ್ಯಾರಂಟಿ ಯೋಜನೆಯಲ್ಲಿ ಗೃಹ ಲಕ್ಷ್ಮಿ ಜಾರಿಗೆ ಇನ್ನೂ ಸರ್ವರ್ ಕಥೆ ಹೇಳುತ್ತಿದ್ದಾರೆ. ಅಕ್ಕಿಯ ಬಗ್ಗೆ ಕೇಂದ್ರ 5 ಕೆಜಿ ಅಕ್ಕಿ ನೀಡುತ್ತಿದ, ಈಗ ಕೇಂದ್ರ ಅಕ್ಕಿ‌ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ವಿದ್ಯುತ್ ಉಚಿತ ಎಂದು ಹೇಳಿ ಎಲ್ಲ ರೀತಿಯ ವಿದ್ಯುತ್ ದರ ಏರಿಕೆ ಮಾಡಲಾಗುತ್ತಿದೆ. ಜುಲೈ 3ರಿಂದ ಅಧಿವೇಶನ ಪ್ರಾರಂಭವಾಗುತ್ತಿದೆ. ಇಲ್ಲಿ ಗ್ಯಾರಂಟಿ ಜಾರಿಯಾಗುವ ತನಕ ಸದನ ನಡೆಸಲು ಬಿಡುವುದಿಲ್ಲ, ಹೊರಗೂ ಹೋರಾಟ ನಡೆಸುತ್ತೇವೆ ಎಂದರು.

ಕಾಂಗ್ರೆಸ್ ಜೊತೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಿ.ಟಿ. ರವಿ, ಪ್ರತಾಪ ಸಿಂಹ ಅವರ ಹೇಳಿಕೆ ಹಾಗೂ ರಾಜ್ಯಾಧ್ಯಕ್ಷರಾಗುವ ಕುರಿತ ಹೇಳಿಕೆಗಳಿಂದ ನನಗೆ ನೋವಾಗಿದೆ. ಈ ಕುರಿತು ಯಾರೂ ಹೇಳಿಕೆ ನೀಡದಂತೆ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಕಾಂಗ್ರೆಸ್​ನ ಅಶಿಸ್ತಿನ ಗಾಳಿ ನಮ್ಮ ಪಕ್ಷಕ್ಕೂ ಬೀಸಿದೆ ಎಂದು ಸ್ಪಷ್ಟಪಡಿಸಿದ್ದೇನೆಯೇ ಹೊರತು, ನಾನು ಯಾರ ಬಗ್ಗೆಯೂ ಹೇಳಿಲ್ಲ ಎಂದರು. ನಾನು ಯತ್ನಾಳ್, ಸಿ.ಟಿ.ರವಿ, ಪ್ರತಾಪ್​ ಸಿಂಹ, ರೇಣುಕಾಚಾರ್ಯ ಅವರಲ್ಲಿ ಹೀಗೆಲ್ಲ ಹೇಳಿಕೆ ನೀಡಿರುವುದು ನಿಲ್ಲಿಸಬೇಕೆಂದು ವಿನಂತಿ‌ ಮಾಡಿಕೊಳ್ಳುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ನಮ್ಮ ತಪ್ಪನ್ನು ಕಾಂಗ್ರೆಸ್ ಪಕ್ಷದವರು ಅಸ್ತ್ರವನ್ನಾಗಿ ಮಾಡಿಕೊಂಡು ಬರುತ್ತಿದ್ದಾರೆ. ಚುನಾವಣಾ ಫಲಿತಾಂಶ ಒಂದು ಕೆಟ್ಟ ಕನಸು. ನಮ್ಮಲ್ಲಿನ‌ ತಪ್ಪನ್ನು ನಾಲ್ಕು ಗೋಡೆಗಳ ನಡುವೆ ಕುಳಿತು ಚರ್ಚೆ ನಡೆಸುತ್ತೇವೆ. ಮೋದಿಯವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಬೇಕಿದೆ. ಅಲ್ಲದೇ ಜಿ.ಪಂ., ತಾ.ಪಂ ಕಡೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಹಾವೇರಿಯಲ್ಲಿ ಕಾಂತೇಶ್ ಸ್ಪರ್ಧೆ ಮಾಡಬೇಕೆಂದು ಅಪೇಕ್ಷೆ ವ್ಯಕ್ತಪಡಿಸಿದ್ದರು‌. ಅಲ್ಲಿನ ಕಾರ್ಯಕರ್ತರ ಒತ್ತಡದಿಂದ ಚುನಾವಣಾ ತಯಾರಿ ನಡೆಸುತ್ತಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೋ ಅವರು ಚುನಾವಣೆ ಎದುರಿಸುತ್ತಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್' ಎಂದು ಹೆಚ್​ಡಿಕೆ ಟೀಕೆ.. ರಾಮಲಿಂಗಾರೆಡ್ಡಿ ತಿರುಗೇಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.