ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಸಿಬ್ಬಂದಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿವಿಯ ವಿದ್ಯಾರ್ಥಿಗಳಿಗೆ ಐದು ದಿನಗಳ ಕಾಲ ರಜೆ ಘೋಷಿಸಲಾಗಿದೆ.
![Corona for Kuvempu vv students and staff](https://etvbharatimages.akamaized.net/etvbharat/prod-images/14203053_thugmbjpg.jpg)
ವಿವಿ ಕುಲಪತಿಯವರ ಆದೇಶದ ಮೇರೆಗೆ ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ ಆವರಣದಲ್ಲಿನ ಎಲ್ಲಾ ಸ್ನಾತಕೋತ್ತರ ಪದವಿ ತರಗತಿಗಳಿಗೆ ನಾಳೆಯಿಂದ (ಜ.17) ಜ.21ರವರೆಗೆ ರಜೆ ಘೋಷಿಸಲಾಗಿದೆ. ಬೋಧಕ ಸಿಬ್ಬಂದಿಗೆ ಆನ್ಲೈನ್ ಕ್ಲಾಸ್ ನಡೆಸುವಂತೆ ನಿರ್ದೇಶನ ನೀಡಲಾಗಿದೆ.
![Corona for Kuvempu vv students and staff](https://etvbharatimages.akamaized.net/etvbharat/prod-images/14203053_thumbjpg.jpg)
ವಿವಿಯಲ್ಲಿ ಸ್ಯಾನಿಟೈಸ್:
ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಆವರಣ ಸೇರಿದಂತೆ ಗ್ರಂಥಾಲಯದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.
![Corona for Kuvempu vv students and staff](https://etvbharatimages.akamaized.net/etvbharat/prod-images/kn-smg-02-kuvempu-vv-corona-ka10011_16012022183410_1601f_1642338250_832.jpg)
ಇದನ್ನೂ ಓದಿ: ರಾಜ್ಯದಲ್ಲಿಂದು 34,047 ಮಂದಿಗೆ ಕೊರೊನಾ, ಸೋಂಕಿನಿಂದ 13 ಸಾವು: ಪಾಸಿಟಿವಿಟಿ ರೇಟ್ ಶೇ.19..!