ETV Bharat / state

ಶಿವಮೊಗ್ಗ ನಗರದಿಂದ ಪ್ರತಿನಿಧಿಸಲು ನನಗೊಂದು ಅವಕಾಶ ಕೊಡಿ : ಆಯನೂರು ಮಂಜುನಾಥ್

ವಿಧಾನಸಭೆ ಚುನಾವಣೆ-2023 - ಶಿವಮೊಗ್ಗದಿಂದ ಸ್ಫರ್ಧಿಸಲು ಅವಕಾಶ ನೀಡಿ- ಬಿಜೆಪಿ ನಾಯಕರಿಗೆ ಎಂಎಲ್​ಸಿ ಆಯನೂರು ಮಂಜುನಾಥ್​ ಮನವಿ

ಆಯನೂರು ಮಂಜುನಾಥ್
ಆಯನೂರು ಮಂಜುನಾಥ್
author img

By

Published : Feb 8, 2023, 6:33 AM IST

ಶಿವಮೊಗ್ಗ: ಶಿವಮೊಗ್ಗ ನಗರದಿಂದ ಸ್ಫರ್ಧಿಸಲು ನನಗೊಂದು ಅವಕಾಶ ಕೊಡಿ ಎಂದು ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿರುವುದಾಗಿ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ತಿಳಿಸಿದ್ದಾರೆ. ನಗರದಲ್ಲಿ ಮಾತಾನಡಿದ ಅವರು, ಕಾರ್ಮಿಕ ಹೋರಾಟದ ಹಿನ್ನೆಲೆಯಿಂದ ಬಂದ ನನಗೆ ಕಾರ್ಮಿಕರು, ನೌಕರರು, ಹಿತೈಷಿಗಳು ಒಂದಷ್ಟು ಜನ ನಾನು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಹಾರೈಸಿದ್ದಾರೆ. ಅವರೆಲ್ಲರ ಆಶಯದಂತೆ ನಾನು ಕೂಡ ಶಿವಮೊಗ್ಗ ಕ್ಷೇತ್ರದ ಸ್ಪರ್ಧಾಳು ಆಗಬೇಕೆಂದು ಬಯಸಿದ್ದೆನೆ. ನಾನು ಕಾರ್ಮಿಕ ಹಿನ್ನೆಲೆಯಲ್ಲಿ ಬದುಕನ್ನು ಕಣ್ಮುಂದೆ ಇಟ್ಟುಕೊಂಡು ನನ್ನದೆ ದೃಷ್ಟಿಯಲ್ಲಿ ನಗರವನ್ನು ಬದಲಾಯಿಸಲು ಶಿವಮೊಗ್ಗ ನಗರದಿಂದ ಸ್ಫರ್ಧಿಸಲು ಅವಕಾಶ ಮಾಡಿಕೊಡಿ ಎಂದು ಪಕ್ಷದ ಎಲ್ಲಾ ನಾಯಕರಿಗೆ ಮನವಿ ಸಲ್ಲಿಸಿದ್ದೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.‌

ಪದವಿಧರ ಕ್ಷೇತ್ರದ ಮತದಾರರಿಗೆ ಪತ್ರ: ಪದವಿಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿನ್ನೆಲೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಕ್ಷೇತ್ರದ ಜನರು ಒಪ್ಪಿಗೆ ಬೇಕೆಂದು ಪದವಿಧರ ಕ್ಷೇತ್ರದ ಮತದಾರರಿಗೆ ಪತ್ರವನ್ನು ಬರೆದಿದ್ದೇನೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ. ಪರಿಷತ್ ನಲ್ಲಿ ಜನರ ಧ್ವನಿಯಾಗಲು ಹೆಚ್ಚಿನ ಅವಕಾಶವಿಲ್ಲದ ಕಾರಣ ವಿಧಾನಸಭೆಯು ಕಾಯ್ದೆ ಕಾನೂನುಗಳನ್ನು ರೂಪಿಸುವ ಸ್ಥಾನವಾದ ಕಾರಣ ಸ್ಪರ್ಧಗೆ ಇಚ್ಛೆ ಪಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದನ್ನು ಹತೋಟಿ ಮಾಡಲು ಈಶ್ವರಪ್ಪ ಶ್ರಮ ಹಾಕಿದ್ದಾರೆ. ದುಡಿದು ತಿನ್ನುವ ಜನರಿಗೆ ನಗರದಲ್ಲಿ‌ ಸಂಕಷ್ಟದ ವಾತಾವರಣ ಸೃಷ್ಟಿಯಾಗಿದೆ. ಇದರಿಂದ‌ ನನಗೂ ಒಂದ್ ಚಾನ್ಸ್ ಕೊಡಿ ಎಂದು ಆಯನೂರು ಮಂಜುನಾಥ್ ವಿನಂತಿಸಿಕೊಂಡಿದ್ದಾರೆ.

ಇನ್ನು ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಟಿಕೆಟ್ ನೀಡುವಂತೆ ಆಯನೂರು ಮಂಜುನಾಥ್ ಅವರ ಅಭಿಮಾನಿಗಳು ಪ್ಲೆಕ್ಸ್ ಹಾಗೂ ಕರಪತ್ರಗಳನ್ನು ಹಂಚುತ್ತಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಪ್ಲೆಕ್ಸ್ ಹಾಕಲಾಗಿದೆ. ಇದರಲ್ಲಿ ಗೂಂಡಾಗಳನ್ನು ಸಮಾಜಘಾತುಕರನ್ನು ಹತ್ತಿಕ್ಕಿ, ಕೋಮುಗಲಭೆ, ದಂಗೆ, ರಕ್ತಪಾತ ರಹಿತ, ನಿಷೇಧಾಜ್ಞೆ ಇಲ್ಲದ ಭಯಮುಕ್ತ ಬದುಕಿಗಾಗಿ ನೆಮ್ಮದಿ, ಶಾಂತಿಯುತ ಶಿವಮೊಗ್ಗಕ್ಕಾಗಿ, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ನಿಯಂತ್ರಣ, ಕೈಗಾರಿಕೆ, ವ್ಯಾಪಾರ, ವಹಿವಾಟು, ನಿರ್ಭಯವಾಗಿ ನಡೆದು, ಬಡವರ ಬದುಕು ಹಸನಾಗಲು ನೌಕರರ, ಕಾರ್ಮಿಕರ ದಿನ ದಲಿತರ ಹಿತರಕ್ಷಣೆಗಾಗಿ ಸದನದಲ್ಲಿ ಗಟ್ಟಿ ಧ್ವನಿಯಾಗಲು ಎಲ್ಲಾ ಜಾತಿ ಜನಾಂಗವನ್ನು ಪ್ರೀತಿಸುವ ಜನಪ್ರತಿನಿಧಿ, ದಿಟ್ಟ ನಾಯಕ, ಹೋರಾಟಗಾರ ಈ ಬಾರಿ ಆಯನೂರು ಮಂಜುನಾಥ್ ಅವರಿಗೆ ಅವಕಾಶ ಸಿಗಲೆಂದು ಹಾರೈಸುವ ಕಾರ್ಯಕರ್ತ, ನಾಗರಿಕರು, ಕಾರ್ಮಿಕರು ಹಾಗೂ ನೌಕರ ಬಂಧುಗಳು ಎಂದು ಪ್ಲೆಕ್ಸ್ ಹಾಕಲಾಗಿದೆ.

ಆಯನೂರು ಮಂಜುನಾಥ್ ಅವರ ಪ್ಲೆಕ್ಸ್ ಪತ್ರದ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಲೇವಡಿ ಮಾಡಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದು ಅಶಿಸ್ತು, ಪಕ್ಷದ ಶಿಸ್ತಿನ ಚೌಕಟ್ಟು ಮೀರಿದ ಆಯನೂರು ಮಂಜುನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಸರಿ‌ ಇಲ್ಲ ಎಂದು ಕಾಂಗ್ರೆಸ್ ಹೇಳಿದಾಗ ಇದು ವಿರೋಧ ಪಕ್ಷದ ಟೀಕೆ ಎಂದಿದ್ದಿರಿ. ಆದರೆ ಈಗ ಆಯನೂರು ಮಂಜುನಾಥ್ ಸಹ ನಮಗೆ ಧ್ವನಿಗೂಡಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೇಳಿದ್ದಾರೆ.

ಇದನ್ನೂ ಓದಿ: ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಹಕ್ಕುಪತ್ರ ನೀಡಿ: ಕೆ.ಬಿ.ಪ್ರಸನ್ನ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.