ಶಿವಮೊಗ್ಗ: ಪ್ರಧಾನಿಮೋದಿಯವರಿಗೆ 56 ಇಂಚಿನ ಎದೆ ಇದ್ದರೆ ಸಾಲದು. ಆ ಎದೆಯಲ್ಲಿ ಸಣ್ಣದೊಂದು ಹೃದಯ ಇರಬೇಕು ಎಂದು ರಾಜ್ಯ ಕೆಪಿಪಿಸಿ ಉಪಾಧ್ಯಕ್ಷ ಪ್ರೋ.ರಾಧಾಕೃಷ್ಣ ಹೇಳಿದರು.
ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಮೋದಿ ದೇಶಕ್ಕೆ ಮಾರಕ. ಬರಿ ಸುಳ್ಳು ಹೇಳಿಕೊಂಡೆ ಅಧಿಕಾರವನ್ನ ನಡೆಸಿದ್ದಾರೆ ಹೊರತು ಅವರು ಹೇಳಿರುವ ಯಾವ ಯೋಜನೆ ಗಳು ಯಶಸ್ವಿಯಾಗಿಲ್ಲ ಎಂದು ದೂರಿದರು.
ಮೋದಿ ಮತ್ತು ಅಮಿತ್ ಶಾ ಅವರೇ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣ. ನೋಟು ಅಮಾನ್ಯೀಕರಣ ಮಾಡಿ ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದಾರೆ. ಉದ್ಯೋಗ ಸೃಷ್ಟಿಸುತ್ತೇನೆಂದು ಜನರಿಗೆ ಸುಳ್ಳಿನ ಕೋಟೆ ಕಟ್ಟಿದ್ದಾರೆ ಹೊರತು ಇವರ ಅಭಿವೃದ್ಧಿ ಏನು ಇಲ್ಲ ಎಂದು ಆರೋಪಿಸಿದರು.
ಎಸ್. ಎಂ . ಕೃಷ್ಣಾರಂತಹ ಹಿರಿಯ ನಾಯಕರು ಹಿಂದಿನ ಸೀಟಿನಲ್ಲಿ ಕೂರುವುದು ನಮಗೆ ಇಷ್ಟ ಇಲ್ಲ. ಕೃಷ್ಣಾ ಅವರು ಕೇವಲ ಶಾರೀರಿಕವಾಗಿ ಮಾತ್ರ ಬಿಜೆಪಿಯಲ್ಲಿದ್ದಾರೆ ಹೊರತು ಮಾನಸಿಕವಾಗಿ ಇಲ್ಲ. ಮೋದಿಯವರಿಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ಮಂದಿರ ನೆನಪಾಗುತ್ತೆ. ರಾಮ ಮಂದಿರ ನಿರ್ಮಾಣ ಮಾಡುವುದಾಗಿದ್ದರೆ 2014ರಲ್ಲೇ ಮಾಡಬೇಕಿತ್ತು. ಆದರೆ ಜನರ ಭಾವನೆಗಳೊಂದಿಗೆ ಆಟ ಆಡಲು ಹೊರಟಿದ್ದಾರೆ ಎಂದು ಟೀಕಿಸಿದರು.