ರಾಮನಗರ: ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆದಿದೆ.
ಚೌಡೇಶ್ ಮತ್ತು ರಾಧಾ ದಂಪತಿಯ ಪುತ್ರ ಧನ್ವಿಕ್ ಮೃತ ಮಗು. ಮನೆಯಲ್ಲಿ ಮಗು ಗ್ಯಾಸ್ ಸ್ಟೌವ್ ಪೈಪ್ ಹಿಡಿದು ಆಟವಾಡುವಾಗ ಸ್ಟೌವ್ ಮೇಲಿದ್ದ ಸಾಂಬರ್ ಪಾತ್ರೆ ಮೈಮೇಲೆ ಬಿದ್ದಿದೆ.
ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಹೆಂಡತಿಗೆ ಚುಡಾಯಿಸುತ್ತಿದ್ದ ಯುವಕನಿಗೆ ಪೆಟ್ರೋಲ್ ಸುರಿದು ಸುಟ್ಟ ಪ್ರಕರಣ: ಮೂವರ ಬಂಧನ