ಚನ್ನಪಟ್ಟಣ (ರಾಮನಗರ): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಚನ್ನಪಟ್ಟಣ ತಾಲೂಕಿನ ಗೌಡಗೆರೆಯಲ್ಲಿರುವ 68 ಅಡಿ ಎತ್ತರದ ವಿಶ್ವ ವಿಖ್ಯಾತ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.
ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟ ಸುದೀಪ್, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ಗೌಡಗೆರೆಯಲ್ಲಿರುವ ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಸುದೀಪ್ ಜನ್ಮದಿನ ಆಚರಣೆ: ಅಭಿಮಾನಿಗಳಿಂದ ಕಿಚ್ಚನ ಕಟೌಟ್ಗೆ ಕೋಣನ ರಕ್ತಾಭಿಷೇಕ!
ಸುದೀಪ್ ಆಗಮನದ ವಿಷಯ ಮೊದಲೇ ತಿಳಿದಿದ್ದ ಸಾವಿರಾರು ಅಭಿಮಾನಿಗಳು ಎರಡ್ಮೂರು ತಾಸು ಮೊದಲೇ ದೇವಸ್ಥಾನದ ಬಳಿ ಜಮಾಯಿಸಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು.