ರಾಯಚೂರು: ಕಾರು ಪಲ್ಟಿಯಾಗಿ ಗೃಹಿಣಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕಿ ಗಾಯಗೊಂಡ ಘಟನೆ ನಗರದ ಹೊರವಲಯದ ಬೈಪಾಸ್ ರಸ್ತೆ ಸಮೀಪ ಅಮರಾವತಿ ಕಾಲೋನಿ ಬಳಿ ಸಂಭವಿಸಿದೆ. ಸಿಂಧನೂರು ಪಟ್ಟಣದ ನಿವಾಸಿ ಶೈಲಜಾ (39) ಮೃತ ಗೃಹಿಣಿ, ಅವರ ಮಗಳು ಲಕ್ಷ್ಮಿ(13) ಗಂಭೀರ ಗಾಯಗೊಂಡಿದ್ದಾಳೆ.
ಹೈದರಾಬಾದ್ಗೆ ತೆರಳಿದ್ದ ಶೈಲಜಾ ಹಾಗೂ ಪತಿ, ಇಬ್ಬರು ಮಕ್ಕಳೊಂದಿಗೆ ಸಿಂಧನೂರಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ರಾಯಚೂರು ಹೊರವಲಯದ ಬೈಪಾಸ್ ಬಳಿ ಕಾರಿಗೆ ಹಸು ಏಕಾಏಕಿ ಅಡ್ಡ ಬಂದಿದೆ. ಹಸುವಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಕಾರು ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಶೈಲಜಾರ ಪತಿ ಹಾಗೂ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಮಹಿಳೆ ಸೇರಿದಂತೆ ಮೂವರು ಸಾವು, ಇಬ್ಬರಿಗೆ ಗಾಯ