ರಾಯಚೂರು: ನಗರದ ಶಕ್ತಿನಗರದಲ್ಲಿರುವ ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ(ಆರ್ಟಿಪಿಎಸ್) ದಲ್ಲಿ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಆರ್ಟಿಪಿಎಸ್ ಕಲ್ಲಿದ್ದಲು ಸಂಸ್ಕರಣಾ(ಕೂಲ್ ಯಾರ್ಡ್) ಘಟಕದಲ್ಲಿ ಈ ದುರ್ಘಟನೆ ಜರುಗಿದೆ. ಒಡಿಶಾ ಮೂಲದ ದೀಪಕ್ ನಾಯಕ(27) ಮೃತ ವ್ಯಕ್ತಿ. ಬೆಲ್ಟ್ನಿಂದ ಘಟಕಗಳಿಗೆ ಕಲ್ಲಿದ್ದಲು ಪೂರೈಸುವಾಗ, ಕಲ್ಲು ಕಂಡು ಬಂದ್ರೆ ಅವುಗಳನ್ನ ತೆಗೆಯುವ ಕೆಲಸವನ್ನು ದೀಪಕ್ ಮಾಡುತ್ತಿದ್ದರು. ಈ ವೇಳೆ ಬೆಲ್ಟ್ನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದು, ದೇಹ ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದೆ.
![Tragedy in Raichur power plant: one labour died](https://etvbharatimages.akamaized.net/etvbharat/prod-images/kn-rcr-01-rtps-death-cctv-potage-7202440_15112019074158_1511f_1573783918_727.jpeg)
ಒಡಿಶಾ ಮೂಲದ ದೀಪಕ್ ಆರ್ಟಿಪಿಎಸ್ನಲ್ಲಿ ಕೆಲಸ ಮಾಡುವುದಕ್ಕೆ ಬಂದು, ಶಕ್ತಿನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.