ರಾಯಚೂರು: ನಗರಸಭೆ ಸದಸ್ಯೆಯೊಬ್ಬರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರ ವಾರ್ಡ್ 31ರ ಸದಸ್ಯೆ ರೇಣಮ್ಮಳನವರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೊಲೀಸರಿಂದ ನಗರಸಭೆ ಸದಸ್ಯೆ ರೇಣಮ್ಮಳನ್ನು ವಶಕ್ಕೆ ಪಡೆದು, ನಗರದ ಸದರ್ ಬಜಾರ್ಗೆ ಕರೆದುಕೊಂಡು ಹೋಗಲಾಯಿತು.
ಓದಿ:ಟಂಟಂ ಹಾಗೂ ಕಾರಿನ ನಡುವೆ ಡಿಕ್ಕಿ: ಇಬ್ಬರ ಸಾವು
ವಿಷಯ ತಿಳಿದ ನಗರಸಭೆ ಅಧ್ಯಕ್ಷ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಲಬುರಗಿ ಹೈಕೋರ್ಟ್ನಲ್ಲಿ ಕೇಸ್ ಇರುವ ಬಗ್ಗೆ ಪೊಲೀಸರಿಗೆ ದಾಖಲೆಗಳನ್ನ ತೋರಿಸಿದರು. ಬಳಿಕ ಸದಸ್ಯೆ ರೇಣಮ್ಮಳನ್ನ ಪೊಲೀಸರು ಬಿಡುಗಡೆ ಮಾಡಿದ್ದಾರೆ.