ರಾಯಚೂರು: ಗ್ರಾಮೀಣ ಠಾಣೆ ಸಿಪಿಐ ಹನುಮರೆಡ್ಡಿ ತೆರಳುತ್ತಿದ್ದ ಇಲಾಖೆಯ ವಾಹನ ರಸ್ತೆ ಬದಿ ಮುಳ್ಳು ಪೊದೆಯೊಳಗೆ ನುಗ್ಗಿದ್ದು, ವಾಹದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಓದಿ: ಸಿಎಂ ಪುತ್ರ ವಿಜಯೇಂದ್ರಗೆ ಬಿಗ್ ರಿಲೀಫ್.. ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ರಾಯಚೂರು ತಾಲೂಕಿನ ಮುರಾಂಪುರ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಕರ್ತವ್ಯ ನಿಮಿತ್ತ ವಾಹನದಲ್ಲಿ ಚಾಲಕ, ಸಿಬ್ಬಂದಿ ಹಾಗೂ ಸಿಪಿಐ ವಾಹನದಲ್ಲಿದ್ದರು. ಈ ವೇಳೆ ರಸ್ತೆಯ ಪಕ್ಕದಲ್ಲಿ ಅಳವಡಿಸಿದ ಸುರಕ್ಷತಾ ಕಬ್ಬಿಣಕ್ಕೆ ಡಿಕ್ಕಿ ಹೊಡೆದಿದ್ದು, ಮುಳ್ಳು ಪೊದೆಯೊಳಗೆ ವಾಹನ ನುಗ್ಗಿದೆ.
ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ, ಎಲ್ಲಾರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಈ ಸಂಬಂಧ ರಾಯಚೂರು ಗ್ರಾಮೀಣ ಠಾಣೆ ಸಿಪಿಐ ದೂರವಾಣಿ ಮೂಲಕ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.