ರಾಯಚೂರು: ಕೃಷಿ ವಿಶ್ವವಿದ್ಯಾಲಯದವರು ತಮ್ಮ ಮೈಂಡ್ ಸೆಟ್ ಚೇಂಜ್ ಮಾಡಿಕೊಳ್ಳಬೇಕು. ವಿವಿಯಿಂದ ಹೊರಬಂದು ರೈತರ ಜಮೀನಿಗಳಿಗೆ ತೆರಳಿ ಬೆಳೆಗಳನ್ನು ಬೆಳೆಯುವ ಕೆಲಸದ ಜತೆಗೆ ಸಂಶೋಧಿಸಿ ರೈತರ ಜಮೀನಗಳನ್ನೇ ಕೃಷಿ ಸಂಶೋಧನೆ ಕೇಂದ್ರಗಳನ್ನಾಗಿ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ವಿವಿಗಳು ರೈತರಿಗೆ ಪ್ರಯೋಜನಕಾರಿಯಾಗುವಂತೆ ಸಂಶೋಧನೆ ಮಾಡಬೇಕು ಎಂದರು.
ಕೇಂದ್ರ ಸರ್ಕಾರ 2023 ಅನ್ನು ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಸಿರಿಧಾನ್ಯಗಳನ್ನು ರೈತರು ಬೆಳೆಯಬೇಕು. ಸರ್ಕಾರ ಇದಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದೆ. ಸಿರಿಧಾನ್ಯಗಳಾದ ಕೊರಲೆ, ಸಜ್ಜೆ, ಊದಲು, ನವಣೆ, ಬರಗು, ಸಾಮೆ, ಆರಕ ಏಳು ಧಾನ್ಯಗಳು. ಇದನ್ನು ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳು ಬೆಳೆಯುವುದಕ್ಕೆ ಮುಂದಾಗಬೇಕು. ಇದಕ್ಕೆ ಬೇಕಾದ ಸಂಸ್ಕರಣಾ ಘಟಕಗಳು ಸೇರಿದಂತೆ ಅಗತ್ಯ ಸೌಲಭ್ಯವನ್ನು ಸರ್ಕಾರ ಕಲ್ಪಿಸುವಂತಹ ಕೆಲಸ ಮಾಡುತ್ತದೆ ಎಂದು ಭರವಸೆ ಕೊಟ್ಟರು.
ಇದನ್ನೂ ಓದಿ:
ತೆಲಂಗಾಣಕ್ಕೆ ರಾಯಚೂರು ಸೇರ್ಪಡೆ ಬಗ್ಗೆ ಕೆಸಿಆರ್ ಹೇಳಿಕೆ ರಾಜಕೀಯ ಪ್ರೇರಿತ: ಸಿಎಂ ಬೊಮ್ಮಾಯಿ
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಸಿರಿಧಾನ್ಯಕ್ಕೆ ಹೆಸರಾಗಬೇಕು: ನಿರ್ಮಲಾ ಸೀತಾರಾಮನ್