ರಾಯಚೂರು: ಜನಸಾಮಾನ್ಯರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ನ್ನು ಅರೆಸ್ಟ್ ಮಾಡಿ, ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ತೆಲಂಗಾಣದ ಕರಿಂನಗರದ ಪೆದ್ದಪಲ್ಲಿ ಗ್ರಾಮದ ಮುರಳಿ ಅಲಿಯಾಸ್ ವೆಂಕಟೇಶ್ ಹಾಗು ಹೈದರಾಬಾದ್ ಲಿಂಗಮಪಲ್ಲಿಯ ಕಿರಣ ರಾಜು ಬಂಧಿತ ಆರೋಪಿಗಳು.
ಆರೋಪಿತಗಳಿಂದ 5.74 ಲಕ್ಷ ರೂಪಾಯಿ ಮೌಲ್ಯದ ನಾನಾ ಬಗೆಯ 115 ಮೊಬೈಲ್‌ಗಳು, 4 ಲಕ್ಷ ಮೌಲ್ಯದ ಒಂದು ಕಾರ್, 55 ಸಾವಿರ ಮೌಲ್ಯದ ಮೂರು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 10.09 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ವೆಂಕಟೇಶ್ ಹಾಗೂ ಕಿರಣ ಎನ್ನುವ ಪ್ರಮುಖ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮೂವರು ಬಾಲಕರನ್ನ ನ್ಯಾಯಮಂಡಳಿ ವಶಕ್ಕೆ ನೀಡಲಾಗಿದೆ. ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಿವಾಸಿ ರಂಗನಾಯಕ ಎನ್ನುವವರ ಮೊಬೈಲ್ ಸಿರವಾರನ ಬಸ್ ನಿಲ್ದಾಣ ಹತ್ತಿರ ಕಳ್ಳತನವಾಗಿದೆ ಎಂದು ದೂರು ನೀಡಿದ್ರು. ದೂರಿನ ಆಧಾರ ಮೇಲೆ ತನಿಖೆ ಮಾಡುವ ವೇಳೆ ಮೊಬೈಲ್ ಕಳ್ಳತನ ಮಾಡುವವರ ಜಾಲ ಪತ್ತೆಯಾಗಿದೆ.
ವೆಂಕಟೇಶ್ ಹಾಗೂ ಕಿರಣ ಬಾಲಕರಿಗೆ ಆಮಿಷಳನ್ನೊಡ್ಡಿ ಸಿರವಾರ, ನೀರಮಾನವಿ, ಕವಿತಾಳ, ಅರಕೇರಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೊಬೈಲ್ ಕಳ್ಳತನ ಮಾಡಿಕೊಂಡು ಬರುವಂತೆ ಹೇಳುತ್ತಿದ್ದರು. ಈ ಕಳ್ಳತನ ಮಾಡಿಕೊಂಡು ಬರುವ ಬಾಲಕರಿಗೆ ನಿತ್ಯ ಊಟ ಹಾಗೂ 100 ರೂಪಾಯಿ ಖರ್ಚಿಗೆ ನೀಡುತ್ತಿದ್ದರು. ಈ ರೀತಿಯಾಗಿ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದರು ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.