ETV Bharat / state

ರಾಯಚೂರು ಜಿಲ್ಲೆಗೆ ಜಲಧಾರೆ ಯೋಜನೆ: ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವರು - undefined

ರಾಯಚೂರು, ವಿಜಯಪುರ, ಮಂಡ್ಯ, ಕೋಲಾರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಲಧಾರೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ವಿಷಯವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ರಾಯಚೂರು ಜಿಲ್ಲೆಗೆ ದೊರೆತ ಜಲಧಾರೆ ಯೋಜನೆ
author img

By

Published : Jul 5, 2019, 4:24 PM IST

ರಾಯಚೂರು: ಬರಪೀಡಿತ ಜಿಲ್ಲೆಗಳ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಶಾಶ್ವತ ನೀರು ಕಲ್ಪಿಸಲು ಜಲಧಾರೆ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಉಪಯೋಗವನ್ನು ರಾಯಚೂರು ಜಿಲ್ಲೆಯೂ ಪಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಗೆ ದೊರೆತ ಜಲಧಾರೆ ಯೋಜನೆ

ನಗರದಲ್ಲಿರುವ ಸರ್ಕೀಟ್​​ ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ಹಾಗೂ ಡ್ಯಾಂ ಮೂಲಕ ನೀರು ಕೊಡಲು ಯೋಜನೆ ರೂಪಿಸಲಾಗಿದೆ. ಆ ಮೂಲಕ ಶಾಶ್ವತ ಬರ ನಿರ್ವಹಣೆಗೆ ಉದ್ದೇಶಿಸಲಾಗಿದ್ದು, ಮೊದಲನೇ ವರ್ಷದ ಅನುಷ್ಠಾನಕ್ಕಾಗಿ ರಾಯಚೂರು, ವಿಜಯಪುರ, ಮಂಡ್ಯ, ಕೋಲಾರ ಜಿಲ್ಲೆಗಳನ್ನು ಆಯ್ಕೆ ಮಾಡಿ ಯೋಜನೆಗೆ ನೀಲನಕ್ಷೆ ತಯಾರಿಸಲಾಗಿದೆ. ರಾಯಚೂರು ಜಿಲ್ಲೆಗೆ ಜಲಧಾರೆ ಯೋಜನೆಗಾಗಿ 1,300 ಕೋಟಿ ವೆಚ್ಚವಾಗಲಿದೆ ಎಂದರು.

ಇನ್ನು, ಕೇಂದ್ರದ ಬಜೆಟ್ ಕುರಿತು ಮಾತನಾಡಿದ ಅವರು, ಈ ಹಿಂದೆ ಕೇಂದ್ರದಿಂದ ಕುಡಿಯುವ ನೀರಿಗೆ ಒಟ್ಟು ವೆಚ್ಚದಡಿ ಶೇಕಡಾ 75ರಷ್ಟು ಅನುದಾನ ನೀಡಲಾಗುತಿತ್ತು. ಆದರೆ, ಈಗ ಶೇಕಡಾ 12 ಮಾತ್ರ ನೀಡುತ್ತಿದೆ. ನರೇಗಾ ಯೋಜನೆಯಡಿ ₹ 1.5 ಸಾವಿರ ಕೋಟಿ ಅನುದಾನ ಉಳಿಸಿಕೊಂಡಿದೆ ಹಾಗೂ ಗ್ರಾಮೀಣ ಸಡಕ್ ಯೋಜನೆಯಡಿ ಯಾವುದೇ ರಸ್ತೆ ನಿರ್ಮಾಣ ಮಾಡಿಲ್ಲ ಇದರ ಕಡೆ ಗಮನಹರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

Intro:ರಾಯಚೂರು ಜಿಲ್ಲೆ ಸೇರಿ ಬರಪೀಡಿತ ಜಿಲ್ಲೆಗಳಿಗೆ ಗ್ರಾಮೀಣ ಭಾಗಗಳಿಗೆ ಕುಡಿಯುವ ಸಮಸ್ಯೆ ಬಗೆಹರಿಸಿ ಶಾಶ್ವತ ನೀರು ಕಲ್ಪಿಸಲು ಜಲಧಾರೆ ಯೋಜನೆ ಜಾರಿಗೆ ತಂದಿದ್ದು ಯೋಜನೆ ಅನುಷ್ಠಾನಕ್ಕೆ ರಾಯಚೂರು ಜಿಲ್ಲೆಗೂ ಸೇರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣೇಭೈರೆಗೌಡ ತಿಳಿಸಿದರು.

Body:ರಾಯಚೂರಿನ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದುಗೆ ಮಾತನಾಡಿ, ನದಿ ಹಾಗೂ ಡ್ಯಾಂ ಮೂಲಕ ನೀರು ಕೊಡಲು ಯೋಜನೆ ರೂಪಿಸಲಾಗಿದೆ ಆ ಮೂಲಕ ಶಾಶ್ವತ ಬರ ನಿರ್ವಹಣೆಗೆ ಉದ್ದೇಶಿಸಲಾಗಿದೆ.ಮೊದಲನೆ ವರ್ಷದ ಅನುಷ್ಠಾನಕ್ಕಾಗಿ ರಾಯಚೂರು,ಬಿಜಾಪುರ, ಮಂಡ್ಯ, ಕೋಲಾರ ಜಿಲ್ಲೆಗಳನ್ನು ಅಯ್ಕೆ ಮಾಡಿದ್ದು ಯೋಜನೆಗೆ ನೀಲಿ ನಕ್ಷೆ ತಯಾರಿಸಲಾಗಿದೆ. ರಾಯಚೂರಿಗೆ ಒಂದು ಸಾವಿರದ ಮುನ್ನೂರು ಕೋಟಿ.(10,300 ,ಕೋ.) ವೆಚ್ಚವಾಗಲಿದೆ ಎಂದರು. ಕೇಂದ್ರದ ಬಜೆಟ್ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಿಂದ ಕುಡಿಯುವ ನೀರಿಗೆ ಒಟ್ಟು ವೆಚ್ಚದಡಿ ಶೇ. 75 ರಷ್ಟು ಅನುದಾನ ನೀಡಲಾಗುತಿತ್ತು ಆದ್ರೆ ಈಗ ಶೆ.12 ಮಾತ್ರ ನೀಡುತ್ತಿದೆ. ನರೇಗಾದಡಿ 1.5 ಸಾವಿರ ಕೋಟಿ ಅನುದಾನ ಉಳಿಸಿಕೊಂಡಿದೆ ಹಾಗೂ ಗ್ರಾಮೀಣ ಸಡಕ್ ಯೋಜನೆಯಡಿ ಯಾವುದೇ ರಸ್ತೆ ನಿರ್ಮಾಣ ಮಾಡಿಲ್ಲ ಇದರ ಕಡೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.