ರಾಯಚೂರು : ಬಹಿರ್ದೆಸೆಗೆಂದು ಏ.13 ರಂದು ಮನೆಯಿಂದ ಹೋದವಳು ಮನೆಗೆ ಬಾರದೇ ಕಾಣೆಯಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದಿದೆ.
ಕಾಣೆಯಾದ ಯುವತಿಯನ್ನು ನಾಗರತ್ನ ಎಂದು ಗುರುತಿಸಿದ್ದು, ಇಂದು ತಂದೆ ನೀಡಿದ ದೂರಿನ ಆಧಾರದ ಮೇಲೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಹಲವಾರು ದಿನಗಳಿಂದ ಸಂಬಂಧಿಕರಿಗೆಲ್ಲಾ ಪೋನ್ ಮೂಲಕ ಮಗಳ ಬಗ್ಗೆ ವಿಚಾರಸಿದ್ದಾರೆ. ಇತ್ತೀಚೆಗೆ ಪೋನ್ ಮಾಡಿ ಮಾತನಾಡಿದ್ದ ನಾಗರತ್ನಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದರಿಂದ ಪಾಲಕರು ಭಯಭೀತಗೊಂಡಿದ್ದಾರೆ.