ರಾಯಚೂರು: ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟದ ಹೊರವಲಯದ ಹಾಸ್ಟೆಲ್ನಲ್ಲಿ ನಡೆದಿದೆ.
ಲಿಂಗಸೂಗೂರು ಪಟ್ಟಣದ ಹೊರವಲಯದ ಎಪಿಎಎಂಸಿ ಅಂಬೇಡ್ಕರ್ ಹಾಸ್ಟೆಲ್ ವಿದ್ಯಾರ್ಥಿನಿ ನಾಪತ್ತೆಯಾದ ಯುವತಿ. ಇದೆ ಫೆಬ್ರವರಿ 12 ರಂದು ದೇಸಾಯಿಬೋಗಾಪುರ ತಾಂಡದ ಯುವತಿ ಸುನೀತಾ(19) ನಾಪತ್ತೆಯಾಗಿದ್ದಾಳೆ. ತನ್ನ ಸ್ನೇಹಿತೆಯರಿಗೆ ಕಂಪ್ಯೂಟರ್ ಕ್ಲಾಸ್‌ಗೆ ತೆರಳುವುದಾಗಿ ಹೇಳಿ ಹೋಗಿದ್ದಾಳೆ.
ಆದ್ರೆ, ಕ್ಲಾಸ್ ಮುಗಿಸಿ ವಾಪಾಸ್ ಹಾಸ್ಟೆಲ್ಗೆ ಮರಳಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು 17 ನೇ ತಾರೀಖಿನಂದು ಲಿಂಗಸೂಗೂರು ಠಾಣೆಯಲ್ಲಿ ಅಪಹರಣದ ಕೇಸ್ ದಾಖಲಿಸಿದ್ದಾರೆ. ದೂರಿನ ಹಿನ್ನೆಲೆ ಲಿಂಗಸೂಗೂರು ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.