ರಾಯಚೂರು: ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವ ಟೇಬಲ್ ಬಡಿಯುವ ಮೂಲಕ ಪೊಲೀಸರಿಗೆ ಆವಾಜ್ ಹಾಕಿದ್ದಾನೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಮಲ್ಲೇಶ್ ಪೂಜಾರಿ ಎಂಬಾತ ಠಾಣೆಯಲ್ಲಿ ಟೇಬಲ್ ಬಡಿದು ಆವಾಜ್ ಹಾಕಿರುವುದು ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ. ನಿನ್ನೆ ಠಾಣೆಯಲ್ಲಿ ಪೊಲೀಸರು ದೂರು ಸ್ವೀಕರಿಸದೇ ಇರದ ಕಾರಣ ಬೈದಿದ್ದಾನೆ ಎಂದು ತಿಳಿದು ಬಂದಿದೆ.