ETV Bharat / state

ಹೃದಯಾಘಾತದಿಂದ ಲೇಖಕ ಕುಕ್ಕರಹಳ್ಳಿ ಬಸವರಾಜು ನಿಧನ - Writer Kukkarahalli basavaraju died

ಹೃದಯಾಘಾತದಿಂದ ಲೇಖಕ ಕುಕ್ಕರಹಳ್ಳಿ ಬಸವರಾಜು ವಿಧಿವಶರಾದರು.

ಕುಕ್ಕರಹಳ್ಳಿ ಬಸವರಾಜು ನಿಧನ
ಕುಕ್ಕರಹಳ್ಳಿ ಬಸವರಾಜು ನಿಧನ
author img

By

Published : Nov 3, 2022, 10:14 PM IST

ಮೈಸೂರು: ಲೇಖಕ ಕುಕ್ಕರಹಳ್ಳಿ ಬಸವರಾಜು (67) ರಾಮಕೃಷ್ಣನಗರದ ನಿವಾಸದಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ರಾಮಕೃಷ್ಣನಗರದ ನಿವಾಸದಲ್ಲಿ ಕುಕ್ಕರಹಳ್ಳಿ ಬಸವರಾಜ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಧನಗಳ್ಳಿಯ ಸಿದ್ದಯ್ಯ ಮತ್ತು ನಿಂಗಮ್ಮ ದಂಪತಿಯ ಪುತ್ರನಾಗಿ 1955ರ ಅಕ್ಟೋಬರ್ 2ರಂದು ಜನಿಸಿದ ಬಸವರಾಜು ಬಹುಮುಖ ಪ್ರತಿಭೆ. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು ಮತ್ತು ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.

ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದರು. ಮೈಸೂರಿನ ಮಂಟೇಸ್ವಾಮಿ ಪ್ರತಿಷ್ಠಾನದ ಸದಸ್ಯರಾಗಿ, ಸಂಕುಲ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ಮೈಸೂರಿನ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ಮಧ್ಯರಾತ್ರಿ ಸ್ವಾತಂತ್ರ್ಯದ ಆಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.

ಮೊಕಾರ, ಜೀವಾಳ, ಪುನುಗ ಹಾಗೂ ಬಾಳಾಟ ಕಥಾ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದರು. ನೀಳ್ಗತೆ ಕಾಲನೊದ್ದವರು, ಕವನ ಸಂಕಲನ ಅವ್ವ ಬರಲೇ ಇಲ್ಲ ಅವರ ಪ್ರಕಟಿತ ಕೃತಿಗಳು. ಸಾವಯವ ಕೃಷಿಗೆ ಮಾರುಕಟ್ಟೆ ಕಲ್ಪಿಸಲು ನಿಸರ್ಗ ಟ್ರಸ್ಟ್(ರಿ) ನೈಸರ್ಗಿಕ ಆಹಾರೋತ್ಪನ್ನ ಕೇಂದ್ರ ಸ್ಥಾಪಿಸಿದ್ದರು. ಮೊಕಾರ ಸಂಕಲನದ ನೀರು ಕಥೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದರೆ, ಬಾಳಾಟ ಸಂಕಲನದ ಅವ್ವ ಪದ್ಯ, ನಾನೇಕೆ ಬರೆಯುತ್ತೇನೆ ಲೇಖನವು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪಠ್ಯವಾಗಿದೆ.

ಕುಕ್ಕರಹಳ್ಳಿ ಬಸವರಾಜು ಅವರಿಗೆ 1996ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, 2003ರಲ್ಲಿ ವಿಶ್ವನಾಥ್ ಕೆ.ವಾರಂಬಳ್ಳಿ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ, 2016ರಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ. 2016ರ ಡಿಸೆಂಬರ್ 12ರಂದು ನಡೆದ ಮೈಸೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

(ಓದಿ: ಮೈಸೂರು: ಯುವಕನ ಬಲಿ ಪಡೆದ ಬೆಟ್ಟದಲ್ಲೇ ಜೋಡಿ ಚಿರತೆ ಪ್ರತ್ಯಕ್ಷ )

ETV Bharat Logo

Copyright © 2025 Ushodaya Enterprises Pvt. Ltd., All Rights Reserved.