ಮೈಸೂರು: ಕೆ.ಆರ್.ನಗರ ತಾಲೂಕಿನ ಅರ್ಜುನ ಹಳ್ಳಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, ಬಾಲಕ ಗಾಯಗೊಂಡಿದ್ದಾನೆ. ಇಲವಾಲದ ಸಮೀಪದ ಮೇಗಳಾಪುರ ಗ್ರಾಮದ ರವಿಶಂಕರ್(32) ಮತ್ತು ಮೈಸೂರಿನ ತ್ರಿಶಾ ಲೇಔಟ್ ನಿವಾಸಿ ಸುರೇಶ್ (32) ಮೃತ ದುರ್ದೈವಿಗಳು. ಸುರೇಶ್ ಅವರ ಪುತ್ರ ಮನ್ವಿತ್(8) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಭಾನುವಾರ ಸಂಜೆ ಮೂವರು ಮೈಸೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಅರ್ಜುನಹಳ್ಳಿ ಬಳಿ ಮೈಸೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಲಾರಿಯೊಂದು ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಬಳಿಕ ಬೈಕ್ ಸವಾರರ ಮೇಲೆ ಹರಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
ಇದನ್ನೂ ಓದಿ: VIDEO ನೋಡಿ: ಆಳವಾದ ಬಾವಿಗೆ ಬಿದ್ದ ಮರಿ ಆನೆ.. ಕೊನೆಗೂ ಸಿಕ್ಕಿತು ರಕ್ಷಣೆ