ಮೈಸೂರು : ಸಂದೇಶ್ ದಿ ಪ್ರಿನ್ಸ್ ಹೋಟೆಲ್ನ ಸಿಬ್ಬಂದಿಯ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿಯ ವಿಚಾರಣೆ ಅಂತ್ಯವಾಗಿದೆ. ಆದರೆ, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೋಟೆಲ್ ಸಿಬ್ಬಂದಿ ತೆರಳಿದ್ದಾರೆ.
ನಿನ್ನೆ ಹೋಟೆಲ್ಗೆ ಎಸಿಪಿ ನೇತೃತ್ವದ ತಂಡ ಭೇಟಿ ನೀಡಿ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿತ್ತು. ಅದೇ ವಿಚಾರವಾಗಿ ಇಂದು ಎಸಿಪಿ ಕಚೇರಿಗೆ ಆಗಮಿಸಿದ ಹೋಟೆಲ್ ಸಿಬ್ಬಂದಿಯಾಗಿರುವ ಆಕಾಶ್ ಹಾಗೂ ಪ್ರಸನ್ನ ಅವರ ವಿಚಾರಣೆಯನ್ನು ಎಸಿಪಿ ಶಶಿಧರ್ ನಡೆಸಿದರು. ವಿಚಾರಣೆ ಪೂರ್ಣಗೊಂಡ ಮೇಲೆ ಸಿಬ್ಬಂದಿ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.