ಮೈಸೂರು : ಸರಿಹೊಂದುವ ರನ್ ವೇ ಇಲ್ಲದ ಕಾರಣ ಮೈಸೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಘಟನೆ ನಡೆದಿದೆ.
ಬೆಳಗಾವಿಯಿಂದ ಮೈಸೂರಿಗೆ ಬಂದ ಎ.ಟಿ.ಆರ್ - 72 ಟೂ ಜೆಟ್ ವಿಮಾನ ಮೈಸೂರು ವಿಮಾನ ನಿಲ್ದಾಣದಲ್ಲಿ ಸರಿಹೊಂದುವ ರನ್ ವೇ ಇಲ್ಲದ ಕಾರಣ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಬೆಳಗಾವಿಯಿಂದ ಬಂದ ಈ ವಿಮಾನ ಮೈಸೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸಿದಾಗ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ಪೈಲಟ್ ಲ್ಯಾಂಡ್ ಮಾಡಲು ಮೈಸೂರು ವಿಮಾನ ನಿಲ್ದಾಣದಲ್ಲಿ ಬೆಲ್ (bell) ಮಾದರಿಯ ಲ್ಯಾಂಡಿಂಗ್ ರನ್ ವೇ ಇಲ್ಲ ಎಂದು ತಿಳಿಸಿದ್ದು, ಕೊನೆ ಕ್ಷಣದಲ್ಲಿ ಮೈಸೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ನಿರಾಕರಿಸಲಾಯಿತು.
ಕೊನೆಗೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಟೂ ಜೆಟ್ ವಿಮಾನವನ್ನು ಚೆನ್ನೈ ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು.