ETV Bharat / state

ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ : ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ ಕೆ ಸವಿತಾ - Dasara film festival

ಮೈಸೂರು ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ ಕೆ ಸವಿತಾ ಅವರು ತಿಳಿಸಿದ್ದಾರೆ.

special-programs-for-tourism-development-in-mysore-mk-savita-joint-director-tourism-department
ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ : ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ ಕೆ ಸವಿತಾ
author img

By ETV Bharat Karnataka Team

Published : Oct 9, 2023, 5:04 PM IST

ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ : ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ ಕೆ ಸವಿತಾ

ಮೈಸೂರು : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಪ್ರವಾಸಿಗರನ್ನು ಸೆಳೆಯಲು ಹಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ ಕೆ ಸವಿತಾ ಹೇಳಿದ್ದಾರೆ. ದಸರಾ ಕಾರ್ಯಕ್ರಮಗಳ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ದಸರಾ ಚಿತ್ರೋತ್ಸವದ ಉಪ ಸಮಿತಿಯ ಕಾರ್ಯಕ್ರಮಗಳು ಹಾಗೂ ದಸರಾ ಸಂಬಂಧ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುನೆಸ್ಕೋದಿಂದ ಜಿಲ್ಲೆಯ ಸೋಮನಾಥಪುರ ದೇವಾಲಯದ ಅಭಿವೃದ್ಧಿ ಆಗಿದೆ. ದಸರಾ ನಂತರ ಇಲ್ಲಿಯೇ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೆಲಿರೈಡ್​ನ್ನು ಪರಿಚಯಿಸುತ್ತಿದ್ದೇವೆ. ಜೊತೆಗೆ ಗಾಳಿಪಟ ಉತ್ಸವ, ಬ್ರಾಂಡಿಂಗ್ ಮೈಸೂರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಮೂಲಕ ಮೈಸೂರಿಗೆ ಪ್ರತ್ಯೇಕ ಲೋಗೋ ಮತ್ತು ಬ್ಲಾಗ್​ಗಳನ್ನು ಮಾಡಲಾಗಿದೆ. ಇದನ್ನೂ ಕೂಡ ಬಿಡುಗಡೆ ಮಾಡುತ್ತೇವೆ. ಇದರ ಜೊತೆಗೆ ಲೇಸರ್​ ಶೋ, ಸ್ಟ್ರೀಟ್​ ಫೆಸ್ಟ್​, ಪ್ರವಾಸಿ ಮಿತ್ರರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ದಸರಾ ದರ್ಶನ ಮಾಡಬೇಕೆಂಬ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಜೊತೆಗೆ ಪ್ರವಾಸೋದ್ಯಮ ಮತ್ತು ದಸರಾ ಸಂಬಂಧ ಹೋಟೆಲ್​, ಟ್ರಾವೆಲ್ಸ್ ಮಾಲೀಕರು, ಕೈಗಾರಿಕೋದ್ಯಮಿಗಳು ತಮ್ಮ ವೆಬ್ ಸೈಟ್​ಗಳಲ್ಲಿ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದೇವೆ. ಪ್ರವಾಸಿಗರು ನೇರವಾಗಿ ಹೋಟೆಲ್​​, ಟ್ರಾವೆಲ್ಸ್​ಗಳನ್ನು ಸಂಪರ್ಕಿಸುವುದರಿಂದ ಇವರ ಮೂಲಕ ಮಾಹಿತಿ ನೀಡಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

7 ದಿನಗಳ ಕಾಲ ಚಲನಚಿತ್ರೋತ್ಸವ : ಈ ಬಾರಿಯ ದಸರಾ ಚಲನಚಿತ್ರೋತ್ಸವವು ಅಕ್ಟೋಬರ್ 15ರಿಂದ 22ರ ವರೆಗೆ ಒಟ್ಟು 7 ದಿನಗಳ ಕಾಲ ನಡೆಯಲಿದೆ. ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜು ಅವರ ಸ್ಮರಣಾರ್ಥ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ ನರಸಿಂಹ ರಾಜು ಮಗಳು ಸುಧಾ ನರಸಿಂಹರಾಜು ಅವರು ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಾ ಚಲನಚಿತ್ರೋತ್ಸವವನ್ನು ಉದ್ಘಾಟನೆ ಮಾಡಲಿದ್ದು, ಹಲವು ನಟ ನಟಿಯರು ಭಾಗವಹಿಸಲಿದ್ದಾರೆ.

ಚಲನಚಿತ್ರೋತ್ಸವದ ಪ್ರಯುಕ್ತ ಮೈಸೂರಿನ ಡಿಆರ್​ಸಿ, ಐನಾಕ್ಸ್ ಮಾಲ್​ಗಳಲ್ಲಿ ಪ್ರತಿನಿತ್ಯ ಚಲನಚಿತ್ರ ಪ್ರದರ್ಶನ ಇರುತ್ತವೆ. ಅದರಲ್ಲಿ ಕಲಾತ್ಮಕ ಚಲನಚಿತ್ರಗಳು, ಕಮರ್ಷಿಯಲ್ ಚಿತ್ರಗಳು, ಮಕ್ಕಳ ಚಿತ್ರಗಳು, ಪ್ರಶಸ್ತಿ ವಿಜೇತ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಾರ್ವಜನಿಕರಿಗೆ 500ರೂ. ವಿದ್ಯಾರ್ಥಿಗಳಿಗೆ 300 ರೂ. ನಿಗದಿಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂಕೆ ಸವಿತಾ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ : ಮೈಸೂರು ದಸರಾ: ಅಂಬಾವಿಲಾಸ ದರ್ಬಾರ್ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.