ETV Bharat / state

ಆಧಾರ್ ಕಾರ್ಡ್​ ತಿದ್ದುಪಡಿಗೆ ರಾತ್ರಿಯಿಡಿ ಸರತಿ ಸಾಲು: ಪರ್ಯಾಯ ಮಾರ್ಗಕ್ಕೆ ಸಾರ್ವಜನಿಕರ ಆಗ್ರಹ

author img

By

Published : Jun 25, 2019, 6:46 PM IST

Updated : Jun 25, 2019, 7:51 PM IST

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿಆಧಾರ್​ ಕಾರ್ಡ್​ ತಿದ್ದುಪಡಿಗೆ ರಾತ್ರಿ, ಹಗಲು ಎನ್ನದೇ ಸಾಲುಗಟ್ಟಿ ನಿಂತಿರುವ ದೃಶ್ಯ ಈಗ ವೈರಲ್​ ಆಗಿದೆ. ಕೂಡಲೇ ತಿದ್ದುಪಡಿಗೆ ಪರ್ಯಾಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ನಂಜನಗೂಡು ಪಟ್ಟಣದಲ್ಲಿ ಆಧಾರ್ ಕಾರ್ಡ್​ ತಿದ್ದುಪಡಿಗೆ ಸಾಲುಗಟ್ಟಿ ನಿಲ್ಲುತ್ತಿರುವ ಸಾರ್ವಜನಕರು

ಮೈಸೂರು: ಮಕ್ಕಳು, ವೃದ್ಧರು ಬಿಸಿಲು, ಮಳೆ ಎನ್ನದೇ ಸರತಿ ಸಾಲಲ್ಲಿ ನಿಂತು ರಾತ್ರಿ, ಹಗಲು ಎನ್ನದೆ ಆಧಾರ್​ ಕಾರ್ಡ್​ ತಿದ್ದುಪಡಿಗಾಗಿ ಕಾಯುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ನಂಜನಗೂಡಿನಲ್ಲಿ ಕಂಡುಬಂತು.

ನಂಜನಗೂಡು ಪಟ್ಟಣದಲ್ಲಿ ಆಧಾರ್ ಕಾರ್ಡ್​ ತಿದ್ದುಪಡಿಗೆ ಸಾಲುಗಟ್ಟಿ ನಿಲ್ಲುತ್ತಿರುವ ಸಾರ್ವಜನಕರು

ಕಳೆದ 15 ದಿನಗಳಿಂದ ಜನರು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಸಾಲುಗಟ್ಟಿ ನಿಂತಿರುವುದು ಇಲ್ಲಿನ ನಂಜನಗೂಡು ಪಟ್ಟಣದಲ್ಲಿ. ಆಧಾರ್ ಕಾರ್ಡ್​ನಲ್ಲಿನ ಲೋಷದೋಷಗಳನ್ನು ಸರಿಪಡಿಕೊಳ್ಳಲು ಕೆನರಾ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಎದುರು ಕಾಯುತ್ತಿದ್ದಾರೆ.

‌ದಿನಕ್ಕೆ 15 ಜನರ ಆಧಾರ್ ಕಾರ್ಡ್​ ಅನ್ನು ಮಾತ್ರ ತಿದ್ದುಪಡಿ ಮಾಡಲಾಗುತ್ತಿರುವುದರಿಂದ ಜನದಟ್ಟನೆ ಹೆಚ್ಚಾಗುತ್ತಿದೆ. ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ತಮ್ಮ ನಿತ್ಯ ಕಾಯಕ ಬಿಟ್ಟು ಹೀಗೆ ಸಾಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಇದು ಅವರ ಆದಾಯಕ್ಕೂ ಕತ್ತರಿಯಾಗಿರುವುದು ಇನ್ನೊಂದು ಬೇಸರದ ಸಂಗತಿ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಜನಗಳ ಒತ್ತಾಯ.

Intro:ಮೈಸೂರು: ಆಧಾರ್ ಕಾರ್ಡ್ ತಿದ್ದುಪಡಿಗಾಗಿ ರಾತ್ರಿಯಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವಂತಹ ಘಟನೆ ನಂಜನಗೂಡು ಪಟ್ಟಣದಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿದೆ.
Body:

ಆಧಾರ್ ಕಾರ್ಡ್ ಈಗ ಪ್ರತಿಯೊಬ್ಬರ ವ್ಯವಹಾರಕ್ಕೂ ಆಧಾರವಾಗಿದೆ ಇಂತಹ ಆಧಾರ್ ಕಾರ್ಡ್ ನಲ್ಲಿ ಸಣ್ಣ ತಪ್ಪಿದ್ದರು ವ್ಯವಹಾರಗಳು ನಡೆಯುವುದಿಲ್ಲ ಇಂತಹ ಕಷ್ಟಗಳನ್ನು ಅನುಭವಿಸಿರುವ ಜನರು ತಮ್ಮ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಲು ರಾತ್ರಿಯೆಲ್ಲಾ ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದಾರೆ.
ಈ ಘಟನೆ ನಡೆಯುತ್ತಿರುವುದು ನಂಜನಗೂಡು ಪಟ್ಟಣದಲ್ಲಿ ಕಳೆದ ೧೫ ದಿನಗಳಿಂದಲೂ ಜನರು ತಮ್ಮ ಆಧಾರ್ ಕಾರ್ಡ್ ನ್ನು ತಿದ್ದುಪಡಿ ಮಾಡಿಸಲು ನಂಜನಗೂಡು ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಮುಂದೆ ರಾತ್ರಿಯಿಡಿ ನಿಂತು ಕಾಯುತ್ತಿದ್ದಾರೆ.‌ ಆದರೆ ದಿನಕ್ಕೆ ೧೫ ಜನರ ಆಧಾರ್ ಕಾರ್ಡ್ ನ್ನು ಮಾತ್ರ ತಿದ್ದುಪಡಿಗೆ ಅವಕಾಶ ಇರುವುದರಿಂದ ಮಧ್ಯರಾತ್ರಿಯೇ ಬಂದು ಸಾಲಿನಲ್ಲಿ ನಿಲ್ಲುತ್ತಾರೆ ಆದರೂ ೧ ದಿನಕ್ಕೆ ತಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಅಗದೆ ಪರಿತಪಿಸುತ್ತಾರೆ. ಜೊತೆಗೆ ಸಣ್ಣ ಸಣ್ಣ ಮಕ್ಕಳು ವಯಸ್ಸಾದವರು ಕೃಷಿ ಕಾರ್ಮಿಕರು ಎಲ್ಲರೂ ಈ ರೀತಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಶಿರ್ಘವೇ ತಪ್ಪಿಸಿ ಪರ್ಯಾಯ ಮಾರ್ಗ ಕಲ್ಪಿಸಬೇಕೆಂದು ಸಾರ್ವಜನಿಕರ ಆಗ್ರಹ.Conclusion:
Last Updated : Jun 25, 2019, 7:51 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.