ETV Bharat / state

ಮೈಸೂರು: ಪೇಜಾವರ ಶ್ರೀಗಳಿಗೆ ಭಾವ ಪುಷ್ಪಾಂಜಲಿ ನಮನ, ಪೀಠಾಧಿಪತಿಗಳಿಂದ ಗುಣಗಾನ

author img

By

Published : Jan 19, 2020, 11:53 PM IST

ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯಸ್ಮರಣೆಯ ಪ್ರಯುಕ್ತ ನಾನಾ ಸಂಘ ಸಂಸ್ಥೆಗಳು ಒಂದುಗೂಡಿ ‘ಭಾವ ಪುಷ್ಪಾಂಜಲಿ’ ನಮನ ಸಲ್ಲಿಸಿದರು.

ಭಾವ ಪುಷ್ಪಾಂಜಲಿ
ಭಾವ ಪುಷ್ಪಾಂಜಲಿ

ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಭಾವ ಪುಷ್ಪಾಂಜಲಿ ಕಾರ್ಯಕ್ರಮದಲ್ಲಿ ನಾನಾ ಸಂಘ ಸಂಸ್ಥೆಗಳು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀಗಳು ಆಚಾರ, ವಿಚಾರಕ್ಕೆ ಕುಂದು ಬಾರದಂತೆ ವೈಚಾರಿಕ ವಿಚಾರಗಳಿಂದಲೂ ಹಿಂದೆ ಸರಿಯದಂತೆ ನಡೆದವರು. ದಲಿತರ ಕೇರಿಗೆ ಪಾದಯಾತ್ರೆ, ಸಂಕಷ್ಟದಲ್ಲಿರುವವರಿಗೆ ಸಹಾಯ, ಮುಸ್ಲಿಮರಿಗೆ ವಿಶೇಷ ಆದ್ಯತೆ ನೀಡಿದ ಅವರು ಧರ್ಮ ಎಂದರೆ ಮಾನವೀಯತೆ ಎಂದು ಅರ್ಥಮಾಡಿಕೊಂಡಿದ್ದರು, ಅದರಂತೆ ಬದುಕಿದರು ಎಂದು ಗುಣಗಾನ ಮಾಡಿದರು.

ಪೀಠಾಧಿಪತಿಗಳಿಂದ ಭಾವ ಪುಷ್ಪಾಂಜಲಿ ನಮನ

ಕಿರಿಯ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದ ಅವರು ದಣಿವರಿಯದೇ ದೀರ್ಘ ಸೇವೆ ಸಲ್ಲಿಸಿದರು. ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಮೂರ್ತಿಯಿದ್ದರೆ, ಕೃಷ್ಣನ ರೂಪದಲ್ಲಿ ಶ್ರೀಗಳು ನಡೆದಾಡುವ ಕೃಷ್ಣರಾಗಿದ್ದರು. ಶ್ರೀಗಳು ಅಷ್ಟಮಠದಲ್ಲಿಯೇ ಹೊಸ ಅಧ್ಯಾಯ ಬರೆದರು. ಹಿರಿಯರಾಗಿ ಅವರು ನಡೆದು ಬಂದ ಹಾದಿ ಅನುಕರಣೀಯ ಎಂದು ತಿಳಿಸಿದರು.

ರಾಮಮಂದಿರ ನಿರ್ಮಾಣ ಅವರ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ವಿವಾದದ ಅಂತಿಮ ತೀರ್ಪಿಗಾಗಿ ಶ್ರೀಗಳ ಜೀವ ಕಾದಿತ್ತು ಎನಿಸುತ್ತದೆ. ಸಮಸ್ಯೆ ಬಗೆಹರಿದಾಗ ನಿಟ್ಟುಸಿರು ಬಿಡುವಂತೆ, ಕರ್ತವ್ಯ ಮುಗಿಸಿ ಅವರು ಹೋದರು ಎನಿಸುತ್ತದೆ. ಎಲ್ಲ ಧರ್ಮದವರು, ಬಡವರು, ದಲಿತರು ಹೀಗೆ ಸಮಾಜದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು. ಸಂಸ್ಕೃತಿ ಸಂರಕ್ಷಣೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ದೈಹಿಕವಾಗಿ ಸ್ವಾಮೀಜಿ ಅಗಲಿರಬಹುದಷ್ಟೇ, ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದರು.

ಅವಧೂತ ದತ್ತಪೀಠದ ಶ್ರೀ ದತ್ತವಿಜಯಾನಂದತೀರ್ಥ ಸ್ವಾಮೀಜಿ, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಅಧ್ಯಕ್ಷ ಶ್ರೀ ಸೋಮನಾಥಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ, ಚಿತ್ರದುರ್ಗ ಶರಣ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Intro:ಶ್ರದ್ಧಾಂಜಲಿBody:ಮೈಸೂರು: ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯಸ್ಮರಣೆಯ ಪ್ರಯುಕ್ತ ನಾನಾ ಸಂಘಸಂಸ್ಥೆಗಳು ಒಂದುಗೂಡಿ ಪೇಜಾವರ ಶ್ರೀಗಳಿಗೆ ಭಾನುವಾರ ‘ಭಾವಪುಷ್ಪಾಂಜಲಿ’ ನಮನ ಸಲ್ಲಿಸಿದರು.
ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪ ಸಭಾಂಗಣದಲ್ಲಿ  ಆಯೋಜಿಸಿದ್ದ ಭಾವ ಪುಷ್ಪಾಂಜಲಿ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ನಂತರ ಮೊದಲಿಗೆ ಮಾತನಾಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು, ಆಚಾರ,ವಿಚಾರಕ್ಕೆ ಕುಂದು ಬಾರದಂತೆ ವೈಚಾರಿಕ ವಿಚಾರಗಳಿಂದಲೂ ಹಿಂದೆ ಸರಿಯದಂತೆ ನಡೆದವರು. ದಲಿತರ ಕೇರಿ ಪಾದಯಾತ್ರೆ, ಸಂಕಷ್ಟದಲ್ಲಿರುವವರಿಗೆ ಸಹಾಯ, ಮುಸ್ಲಿಂರಿಗೆ ವಿಶೇಷ ಆದ್ಯತೆ ನೀಡಿದ ಅವರು ಧರ್ಮ ಎಂದರೆ ಮಾನವೀಯತೆ ಎಂದು ಅರ್ಥಮಾಡಿಕೊಂಡಿದ್ದರು ಅದರಂತೆ ಬದುಕಿದರು ಎಂದರು.
ಕಿರಿಯ ವಯಸ್ಸಿಗೆ ಸಂನ್ಯಾಸತ್ವ ಸ್ವೀಕರಿಸಿದ ಅವರು ದಣಿವರಿಯದೇ ಧೀರ್ಘ ಸೇವೆ ಸಲ್ಲಿಸಿದರು. ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಶ್ರೀ ಕೃಷ್ಣ ಮೂರ್ತಿಯಿದ್ದರೆ, ಕೃಷ್ಣನ ರೂಪದಲ್ಲಿ ಶ್ರೀಗಳು ನಡೆದಾಡುವ ಕೃಷ್ಣರಾಗಿದ್ದರು. ಅಷ್ಟಮಠದಲ್ಲಿಯೇ ಹೊಸ ಅಧ್ಯಾಯ ಬರೆದರು. ಹಿರಿಯರಾಗಿ ಅವರು ನಡೆದ ಹಾದಿಯು ಎಲ್ಲರಿಗೂ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.
ಯಾರ ಮನಸ್ಸಿಗೂ ನೋವುಂಟು ಮಾಡದಂತೆ ಎಚ್ಚರವಹಿಸುತ್ತಿದ್ದ ಶ್ರೀಗಳು ಬಹಳ ಸೂಕ್ಷ್ಮಮತಿಯಾಗಿದ್ದರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದ್ದು, ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ನೀಡಿದ ಸಲಹೆಯಂತೆ ಹಿಂದೂ ಧರ್ಮದ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯವನ್ನು ಮಾಡಿದರು ಎಂದು ಹೇಳಿದರು.
ರಾಮಮಂದಿರ ನಿರ್ಮಾಣವು ಅವರ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಅದರ ತೀರ್ಪಿಗಾಗಿ ಶ್ರೀಗಳ ಜೀವ ಕಾದಿತ್ತು ಎನಿಸುತ್ತದೆ. ಸಮಸ್ಯೆ ಬಗೆಹರಿದಾಗ ನಿಟ್ಟುಸಿರು ಬಿಡುವಂತೆ. ಕರ್ತವ್ಯ ಮುಗಿಸಿ ಹೋದರು ಎನಿಸುತ್ತದೆ. ಎಲ್ಲ ಧರ್ಮದವರು, ಬಡವರು, ದಲಿತರು ಹೀಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಂಸ್ಕೃತಿ ಸಂರಕ್ಷಣೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ದೈಹಿಕವಾಗಿ ಅಗಲಿರಬಹುದಷ್ಟೇ ನಮ್ಮೆಲ್ಲದರ ಮನದಲ್ಲಿ ಅವರು ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ತಿಳಿಸಿದರು.
ಅವಧೂತ ದತ್ತಪೀಠದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಅಧ್ಯಕ್ಷ ಶ್ರೀ ಸೋಮನಾಥಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ, ಚಿತ್ರದುರ್ಗ ಶರಣ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಇದ್ದರು.
 
Conclusion:ಶ್ರದ್ಧಾಂಜಲಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.