ಮೈಸೂರು: ಲಾಕ್ಡೌನ್ ಸಂಕಷ್ಟ ಸಂದರ್ಭದಲ್ಲೂ ಕಂದಾಯ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ರಾಜ್ಯಕ್ಕೆ ಮೈಸೂರು ಜಿಲ್ಲೆ 2ನೇ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡು ವ್ಯಾಪಕವಾಗಿ ಹರಡಿತ್ತು. ನಂತರ ಲಾಕ್ಡೌನ್ ಘೋಷಣೆಯಾಗಿ ಕೆಲಸಗಳು ಸ್ವಲ್ಪ ಮಟ್ಟಿಗೆ ಸ್ಥಗಿತಗೊಂಡಿದ್ದವು. ಆದರೆ ಕಂದಾಯ ಇಲಾಖೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಕೋವಿಡ್ ಸಂದರ್ಭದಲ್ಲೂ ಕೆಲಸಗಳು ನಡೆದಿದ್ದವು. ಕಂದಾಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ಷಿಪ್ರ ಹಾಗೂ ಗರಿಷ್ಠ ಕಡತ ವಿಲೇವಾರಿಗೆ ಕಂದಾಯ ಇಲಾಖೆಯು ಜಿಲ್ಲಾವಾರು ನೀಡುವ ಶ್ರೇಣಿಯಲ್ಲಿ ಮೈಸೂರು ಜಿಲ್ಲೆಗೆ ನವೆಂಬರ್ ತಿಂಗಳಲ್ಲಿ 2ನೇ ಸ್ಥಾನ ಪಡೆದಿದ್ದು, ಕಳೆದ ಎರಡು ತಿಂಗಳಲ್ಲಿ ಮೈಸೂರು ಜಿಲ್ಲೆ ಕೊನೆಯ 5ನೇ ಸ್ಥಾನದಲ್ಲಿತ್ತು.
ಓದಿ:ರಾಹುಲ್, ಪ್ರಿಯಾಂಕ ಗಾಂಧಿ ಕ್ರಾಸ್ ಬ್ರೀಡ್ ಅಂತ ಸಿದ್ದರಾಮಯ್ಯ ಒಪ್ಕೊತಾರಾ?: ಸಚಿವ ಕೆ.ಎಸ್.ಈಶ್ವರಪ್ಪ
ಈಗ 2ನೇ ಸ್ಥಾನಕ್ಕೆ ಏರಿದ್ದು, ಭೂ ಪರಿವರ್ತನೆ, ಸರ್ವೆ ಮತ್ತು ಪೋಡಿ ವಿಲೇವಾರಿ, ಡಿಸಿ ಮತ್ತು ಎಸಿ ನ್ಯಾಯಾಲಯದಲ್ಲಿ ನಡೆಯುವ ಕಂದಾಯ ಪ್ರಕರಣಗಳ ವಿಲೇವಾರಿ, ಪಿ.ವೈ.ಕೆ.ಐ ಆರ್.ಟಿ.ಸಿ ತಿದ್ದುಪಡಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಪ್ರತಿ ತಿಂಗಳು ಜಿಲ್ಲಾವಾರು ಶ್ರೇಣಿ ನೀಡುತ್ತದೆ. ಅದರಲ್ಲಿ ಮೈಸೂರು ಜಿಲ್ಲೆಗೆ 2ನೇ ಸ್ಥಾನ ಬಂದಿದೆ. ಸಾರ್ವಜನಿಕರ ಕೆಲಸಗಳನ್ನು ಎಲ್ಲಾ ಅಧಿಕಾರಿಗಳು ಬದ್ಧತೆಯಿಂದ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.