ETV Bharat / state

ದಸರಾ ಯಶಸ್ವಿಗೆ ಧನ್ಯವಾದ, ದಸರಾ ಲೆಕ್ಕ ಶೀಘ್ರದಲ್ಲೇ ಕೊಡುವೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ - mysore dasara

ಲಾಕ್‌ಡೌನ್ ಪರಿಣಾಮವಾಗಿ ನಲುಗಿ ಹೋಗಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೀಪಾಲಂಕಾರಕ್ಕೆ ವಿಶೇಷ ಒತ್ತು ನೀಡಲಾಗಿದೆ. 2020 ಮತ್ತು 2019ರ ದಸರಾಗಿಂತ ಈ ಬಾರಿ ಹೆಚ್ಚಿನ ಆಕರ್ಷಣೆ ಇದೆ. 105 ಕಿ.ಮೀ ಉದ್ದದಲ್ಲಿ 119 ರಸ್ತೆಗಳು, 96 ವೃತ್ತಗಳು, 49 ಪ್ರತಿಕೃತಿಗಳು ವಿಶೇಷವಾಗಿತ್ತು. 60 ಜನ ಇಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ..

minister ST somshekhar pressmeet about dasara
ದಸರಾ ಯಶಸ್ವಿಗೆ ಧನ್ಯವಾದ
author img

By

Published : Oct 16, 2021, 4:03 PM IST

ಮೈಸೂರು : ಮೈಸೂರು ದಸರಾ ಮಹೋತ್ಸವ-2021 ಸುಸೂತ್ರವಾಗಿ, ಯಶಸ್ವಿಯಾಗಿ ನೆರವೇರಿದೆ. ದಸರಾ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಬೆಂಬಲ ಹಾಗೂ ಪ್ರೋತ್ಸಾಹಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಈ ಬಾರಿಯ ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೀನಿ ಎಂದು ಸಚಿವ ಎಸ್‌ ಟಿ ಸೋಮಶೇಖರ್ ಹೇಳಿದರು.

ದಸರಾ ಮಹೋತ್ಸವ ಯಶಸ್ವಿ ಆಗಿರೋದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್ ಧನ್ಯವಾದ ಅರ್ಪಿಸಿರುವುದು..

ಮಾಧ್ಯಮಗಳಿಗೆ ವಿಶೇಷ ಧನ್ಯವಾದ : ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಸರಾ ಕಾರ್ಯಕ್ರಮಗಳನ್ನು ಸರಳವಾಗಿ ಆಯೋಜಿಸಿದ್ದರಿಂದ ಹೆಚ್ಚು ಜನರು ಬಂದು ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಇರಲಿಲ್ಲ.

ಆದರೆ, ನಮ್ಮ ಎಲ್ಲಾ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ನೀಡಿದ ಉತ್ತಮ ಪ್ರಚಾರದಿಂದಾಗಿ ಈ ಕಾರ್ಯಕ್ರಮಗಳು ಜನರನ್ನು ತಲುಪುವಂತಾಯಿತು. ದಸರಾ ಆರಂಭದಿಂದಲೂ ಮಾಧ್ಯಮಗಳು ನಮಗೆ ನೀಡಿದ ಬೆಂಬಲ, ಪ್ರೋತ್ಸಾಹ ತುಂಬಾ ದೊಡ್ಡದು. ಅದಕ್ಕಾಗಿ ಮಾಧ್ಯಮಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ವರ್ಚುವಲ್ ಆಗಿ ಲಕ್ಷಾಂತರ ಜನರಿಂದ ವೀಕ್ಷಣೆ : ದಸರಾ ಕಾರ್ಯಕ್ರಮಗಳನ್ನು ಹೆಚ್ಚು ಜನರು ವೀಕ್ಷಿಸಲು ಅವಕಾಶ ಸಿಗದಿದ್ದರೂ ವರ್ಚುವಲ್ ಆಗಿ ಲಕ್ಷಾಂತರ ಜನರು ನೋಡಿದ್ದಾರೆ. ಜಂಬೂಸವಾರಿ ಕಾರ್ಯಕ್ರಮವನ್ನು ನಮ್ಮ ಅಧಿಕೃತ ಫೇಸ್‌ಬುಕ್‌ನಲ್ಲಿ 1 ಲಕ್ಷದ 85 ಸಾವಿರ, ಯೂಟ್ಯೂಬ್‌ನಲ್ಲಿ 32500 ಹಾಗೂ ವೆಬ್‌ಸೈಟ್‌ನಲ್ಲಿ 5300 ವೀಕ್ಷಣೆ ಆಗಿದೆ. ದಸರಾ ಉದ್ಘಾಟನೆಯಿಂದ ಜಂಬೂಸವಾರಿವರೆಗೆ ಫೇಸ್‌ಬುಕ್‌ನಲ್ಲಿ 5.12 ಲಕ್ಷ, ಯೂಟ್ಯೂಬ್‌ನಲ್ಲಿ 49,500 ಹಾಗೂ ವೆಬ್‌ಸೈಟ್‌ನಲ್ಲಿ 23,150 ವೀಕ್ಷಣೆ ಆಗಿದೆ ಎಂದು ತಿಳಿಸಿದರು.

ಈ ಬಾರಿಯ ದಸರಾ ಮಹೋತ್ಸವದಲ್ಲಿ ಹಲವು ವಿಶೇಷಗಳನ್ನು ನಾವು ಕಾಣಬಹುದು. ಮುಖ್ಯವಾಗಿ ಚಿನ್ನದ ಅಂಬಾರಿ ಮೇಲೆ‌ ಸಾಗುವ ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ವಿಶೇಷವಾಗಿ ಅಲಂಕೃತಗೊಂಡ ವಾಹನದಲ್ಲಿ ನಾದಸ್ವರ, ವೇದಘೋಷಗಳ ಮುಂತಾದ ಕಲಾತಂಡಗಳೊಂದಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ತರಲಾಯಿತು. ಜನರು ಮಾರ್ಗ ಮಧ್ಯೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ನೋಡಿ ಭಕ್ತಿಪರವಶರಾಗಿ ಸಂತೋಷಪಟ್ಟರು.

ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದೆ : ಕಳೆದ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಅರಮನೆ ವೇದಿಕೆಗೆ ಸೀಮಿತವಾಗಿತ್ತು. ಸರಳವಾಗಿ ದಸರಾ ಆಯೋಜಿಸುತ್ತಿದ್ದರೂ ಸಹ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ವರ್ಷ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಲಾಯಿತು.

ಅರಮನೆ ವೇದಿಕೆಯಲ್ಲಿ ಪ್ರತಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ 'ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ' ಎನ್ನುವ ಮತ್ತೊಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಕಲಾಮಂದಿರದಲ್ಲಿ ಎರಡು ದಿನ ದಿನಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೈಸೂರಿನಿಂದ ಹೊರಗೆ ನಂಜನಗೂಡಿನಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಈ ಎಲ್ಲಾ ವೇದಿಕೆಗಳಲ್ಲಿ ಸುಮಾರು 100 ಕಲಾತಂಡದವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ದೀಪಾಲಂಕಾರಕ್ಕೆ ವಿಶೇಷ ಒತ್ತು : ಲಾಕ್‌ಡೌನ್ ಪರಿಣಾಮವಾಗಿ ನಲುಗಿ ಹೋಗಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೀಪಾಲಂಕಾರಕ್ಕೆ ವಿಶೇಷ ಒತ್ತು ನೀಡಲಾಗಿದೆ. 2020 ಮತ್ತು 2019ರ ದಸರಾಗಿಂತ ಈ ಬಾರಿ ಹೆಚ್ಚಿನ ಆಕರ್ಷಣೆ ಇದೆ. 105 ಕಿ.ಮೀ ಉದ್ದದಲ್ಲಿ 119 ರಸ್ತೆಗಳು, 96 ವೃತ್ತಗಳು, 49 ಪ್ರತಿಕೃತಿಗಳು ವಿಶೇಷವಾಗಿತ್ತು. 60 ಜನ ಇಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ.

ಗುತ್ತಿಗೆದಾರರು, ಸಿಬ್ಬಂದಿ, ವಿದ್ಯುತ್ ಕೆಲಸಗಾರರು ಸೇರಿ ಸುಮಾರು 400 ಜನ ಈ ವಿಶೇಷ ದೀಪಾಲಂಕಾರಕ್ಕಾಗಿ ಕೆಲಸ ಮಾಡಿದ್ದಾರೆ. ಕಣ್ಣಿಗೆ ಹಬ್ಬ, ಮನಸ್ಸಿಗೆ ಉಲ್ಲಾಸ ನೀಡುವ ದೀಪಾಲಂಕಾರವನ್ನು ಕಣ್ತುಂಬಿಕೊಂಡ ಪ್ರವಾಸಿಗರು ಹಾಗೂ ಮೈಸೂರಿನ ಮಹಾಜನತೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್ ಎಂ ಕೃಷ್ಣ ಅವರು ಮೈಸೂರಿನಲ್ಲಿ ಫಿಲಂ ಸಿಟಿ, ವಿಮಾನ ನಿಲ್ದಾಣದಲ್ಲಿ ರನ್ ವೇ ಅಭಿವೃದ್ಧಿ ಮುಂತಾದ ಸಲಹೆಗಳನ್ನು ನೀಡಿದ್ದರು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದರು.

ದಸರಾ ಮಹೋತ್ಸವಕ್ಕೆ ₹6 ಕೋಟಿ ಮಂಜೂರು : ದಸರಾ ಮಹೋತ್ಸವಕ್ಕೆ ಈ ವರ್ಷ ಮುಖ್ಯಮಂತ್ರಿಗಳು ₹6 ಕೋಟಿ ಮಂಜೂರು ಮಾಡಿದ್ದರು. ಈ ಅನುದಾನದಲ್ಲಿ ಈಗಾಗಲೇ ಚಾಮರಾಜನಗರ ದಸರಾ ಮತ್ತು ಶ್ರೀರಂಗಪಟ್ಟಣ ದಸರಾಕ್ಕೆ ತಲಾ ₹50 ಲಕ್ಷ ಹಾಗೂ ಅರಕಲಗೂಡು ದಸರಾಗೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಕಳೆದ ವರ್ಷ ದಸರಾ ಮುಗಿದ ಕೂಡಲೇ ಖರ್ಚುವೆಚ್ಚದ ಮಾಹಿತಿಯನ್ನು ಕೊಟ್ಟಿದ್ದೆ. ಅದರಂತೆ ಈ ವರ್ಷವೂ ಸದ್ಯದಲ್ಲೇ ಅದರ ಖರ್ಚುವೆಚ್ಚದ ಮಾಹಿತಿ ನೀಡಲಾಗುವುದು ಎಂದು ಹೇಳಿದರು. 2021-22ನೇ ಸಾಲಿನಲ್ಲಿ ಸಹಕಾರಿ ಸಂಸ್ಥೆಗಳಿಂದ 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ. ಏಪ್ರಿಲ್ 1ರಿಂದ ಈವರೆಗೆ 12 ಲಕ್ಷ 90 ಸಾವಿರ ರೈತರಿಗೆ 9200 ಕೋಟಿ ರೂ.ಗಳನ್ನು ನೀಡಲಾಗಿದೆ.

ಸಂಸದಪ್ರತಾಪ್ ಸಿಂಹ, ಶಾಸಕ ಜಿ ಟಿ ದೇವೇಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿ ಧನ್ಯವಾದ ಹೇಳಿದರು. ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್‌ಪಿ ಆರ್.ಚೇತನ್, ಡಿಸಿಪಿ ಪ್ರದೀಪ್ ಗುಂಟಿ, ಜಿಪಂ ಸಿಇಒ ಯೋಗೇಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.