ETV Bharat / state

ಡಿ ಕೆ ಶಿವಕುಮಾರ್​ ತಪ್ಪು ಮಾಡಿರಲಾರರು: ಜೆ.ಸಿ. ಮಾಧುಸ್ವಾಮಿ

author img

By

Published : Mar 27, 2021, 4:37 PM IST

Updated : Mar 27, 2021, 4:49 PM IST

ಸಿಡಿ ಪ್ರಕರಣದ ಯುವತಿಯಿಂದ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವ ಜೆ.ಸಿ. ಮಾಧುಸ್ವಾಮಿ, ಯುವತಿ ಹೇಳಿಕೆಯಲ್ಲಿ ಡಿಕೆಶಿ ಹೆಸರು ಬಂದಿದೆ ಎಂದ ಕೂಡಲೇ ಅವರು ತಪ್ಪು ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಅವರನ್ನು ನಾನು‌ ತುಂಬ ವರ್ಷಗಳಿಂದ ನೋಡಿದ್ದೇನೆ. ಅವರು ಈ ರೀತಿಯ ತಪ್ಪನ್ನು ಮಾಡಿರಲಾರರು ಎಂದು ಹೇಳಿದ್ದಾರೆ.

j c madhuswamy
ಸಚಿವ ಜೆ.ಸಿ. ಮಾಧುಸ್ವಾಮಿ

ಮೈಸೂರು: ಸಿಡಿ ಪ್ರಕರಣದ ಯುವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೆಸರು ಪ್ರಸ್ತಾಪವಾದ ಹಿನ್ನೆಲೆ, ಅವರನ್ನು ನಾನು‌ ತುಂಬಾ ವರ್ಷಗಳಿಂದ ನೋಡಿದ್ದೇನೆ. ಅವರು ಈ ರೀತಿಯ ತಪ್ಪನ್ನು ಮಾಡಿರಲಾರರು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯೆ

ಇಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ಸಿಡಿ ಪ್ರಕರಣದ ಯುವತಿಯಿಂದ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಡಿ.ಕೆ. ಶಿವಕುಮಾರ್ ಈ ರೀತಿ ತಪ್ಪು ಮಾಡಿರಲಾರರು ಎಂಬುದು ನನ್ನ ಭಾವನೆ. ಯುವತಿ ಹೆಸರನ್ನು ಮಾತ್ರ ಹೇಳಿದ್ದಾರೆ, ಬೇರೇನೂ ವಿಚಾರಗಳನ್ನು ಹೇಳಿಲ್ಲ, ತನಿಖೆ ನಡೆಯುತ್ತಿದೆ. ದೂರುದಾರರು ಬರಬೇಕು ಆಮೇಲೆ‌ ಬಂಧಿಸುವ ಅವಕಾಶ ಇದೆಯಾ ಎಂಬುದನ್ನು ನೋಡಬೇಕಾಗುತ್ತದೆ ಎಂದರು.

ಸಂತ್ರಸ್ತೆಯ ಪ್ರತಿ ಹೇಳಿಕೆಯಲ್ಲಿಯೂ ಗೊಂದಲಗಳಿವೆ:

ಪ್ರಕರಣದಲ್ಲಿ ಆರೋಪಿ ನರೇಶ್ ಪಾತ್ರ ಇದೆಯಾ ಎಂಬುದರ ಬಗ್ಗೆ ಗೊತ್ತಿಲ್ಲವೆಂದು ಹೇಳುವುದಕ್ಕೆ ಆಗುವುದಿಲ್ಲ. ಆಕೆ ಮಾತನಾಡಿರುವುದು, ಡಿ.ಕೆ. ಶಿವಕುಮಾರ್ ಹೇಳಿರುವುದು ಕೇಳಿದ್ದೇನೆ. ನರೇಶ್ ಬೇರೆ ಕಥೆಯನ್ನು ಹೇಳುತ್ತಿದ್ದಾನೆ. ಸಿಡಿ ಕೇಸ್ ನ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪೂರಕ ಅಂಶಗಳಿದ್ದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸಬಹುದು ಅಥವಾ ಬರೀ ವಿಚಾರಣೆ ಮಾಡಿ ಬಿಡಬಹುದು. ಸಂತ್ರಸ್ತೆಯ ಪ್ರತಿ ಹೇಳಿಕೆಯಲ್ಲಿಯೂ ಗೊಂದಲಗಳಿವೆ. ಎಲ್ಲಿಯೂ ಧೃಡವಾದ ಹೇಳಿಕೆಯನ್ನು ಆಕೆ ನೀಡುತ್ತಿಲ್ಲ. ಈ ತನಿಖೆ ಪೊಲೀಸರಿಗೂ ಕಷ್ಟವಾಗಿದೆ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಘಟನೆಯಿಂದ ಮುಜುಗರವಾಗುತ್ತಿದೆ:

ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ಬಹಳ ಮುಜುಗರವಾಗುತ್ತಿದೆ. ನಾವು ಪ್ರಬುದ್ಧರಾಗಿದ್ದರೆ ವೈಯಕ್ತಿಕ ಬದುಕನ್ನು ಚರ್ಚೆ ಮಾಡುತ್ತಲೇ ಇರುತ್ತಿರಲಿಲ್ಲ. ವೈಯಕ್ತಿಕವಾಗಿ ಎಂದು ಸುಮ್ಮನಿರಬಹುದಿತ್ತು. ಆದರೆ ಎಲ್ಲಾ ಕಡೆ ತೇಜೋವಧೆ ನಡೆಯುತ್ತಿದ್ದು, ರಾಜ್ಯದ ಮರ್ಯಾದೆ ಕಡಿಮೆ ಆಗುತ್ತಿದೆ ಎಂದು ‌ಮೇಟಿ ಪ್ರಕರಣವನ್ನು ಉದಾಹರಣೆಯಾಗಿ ಸಚಿವ ಮಾಧುಸ್ವಾಮಿ ನೀಡಿದರು.

ಇದನ್ನೂ ಓದಿ: ಯುವತಿ ಹೆಸರು ಪ್ರಸ್ತಾಪಿಸಿದ್ದಕ್ಕೆ ಡಿ ಕೆ ಶಿವಕುಮಾರ್ ತಪ್ಪಿತ್ತಸ್ಥರು ಅನ್ನೋಕಾಗಲ್ಲ : ಸಚಿವೆ ಶಶಿಕಲಾ ಜೊಲ್ಲೆ

Last Updated : Mar 27, 2021, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.