ಮೈಸೂರು: ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ಹಿನ್ನೀರು ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ತಲೆಯೆತ್ತುತ್ತಿರುವ ಸಂಬಂಧ, ಕಾರಣ ಕೇಳಿ ಅರಣ್ಯ ಇಲಾಖೆಯು ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.
ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೆಳ್ತೂರು ಗ್ರಾಮದ (ಕಬಿನಿ ಹಿನ್ನೀರು ಪ್ರದೇಶ) ಸರ್ವೆ ನಂ. 144 ಮತ್ತು 14ರ2 ವ್ಯಾಪ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳ ಹುಲಿ ಯೋಜನೆ ಹಾಗೂ ಆನೆಗಳಿಗೆ ತೊಂದರೆಯಾಗಲಿದೆ. ಹಿನ್ನೀರು ಪ್ರದೇಶದಲ್ಲಿ ರೆಸಾರ್ಟ್ ನಿರ್ಮಿಸುತ್ತಿರುವ ಎಂದು ಅರಣ್ಯ ಇಲಾಖೆ ಕಾರಣ ಕೇಳಿದೆ.