ಮೈಸೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಈ ಮಧ್ಯೆ ನಗರ ಪಾಲಿಕೆ ಸದಸ್ಯರೊಬ್ಬರು ನವಜೋಡಿಗಳಿಗೆ ಪೆಟ್ರೋಲ್ ಕಾಣಿಕೆ ನೀಡುವ ಮೂಲಕ ಶುಭಕೋರಿದರು.
ಓದಿ: 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದು ದಾಖಲೆ; ಜೋಕೊವಿಕ್ ಮುಡಿಗೆ 18ನೇ ಗ್ರ್ಯಾಂಡ್ಸ್ಲ್ಯಾಮ್
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್ ಬಾಬು ಅವರ ಪುತ್ರಿ ನಿಕಿತಾ ಹಾಗೂ ನಿತೇಶ್ ಭಾಸ್ಕರರವರ ವಿವಾಹ ಮಹೋತ್ಸವ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರಪಾಲಿಕೆ ಸದಸ್ಯೆ ಶೋಭಾ ಹಾಗೂ ಪತಿ ಸುನೀಲ್, ಸ್ನೇಹಿತರು ನೂತನ ವಧು-ವರರಿಗೆ ಪೆಟ್ರೋಲ್ ಕಾಣಿಕೆ ನೀಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದರು.
ಹೂಗುಚ್ಛ ಹಾಗೂ ಹಣ ಇನ್ನಿತರ ವಸ್ತುಗಳನ್ನು ನೀಡುವ ಬದಲು, ಪೆಟ್ರೋಲ್ ದರ ದುಪ್ಪಟ್ಟಾದ ಕಾರಣ ವಧು-ವರನಿಗೆ ಪೆಟ್ರೋಲ್ ನೀಡಿ ಶುಭ ಕೋರಿದ್ದಾರೆ.