ಮೈಸೂರು: ಇಂದು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾದ್ಯಮಗೋಷ್ಠಿ ನಡೆಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಆ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮೇಕೆದಾಟು ಯೋಜನೆಗೆ ಅವಕಾಶ ಕೊಡದ ಮೋದಿಯವರು ಸಮುದ್ರಕ್ಕೆ ನೀರು ಹರಿಯಲು ಅನುಮತಿ ಕೊಡುತ್ತಾರೆಯೇ ಎಂದು ನರೇಂದ್ರ ಮೋದಿ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಗೆ ಪತ್ರ: ತಮಿಳುನಾಡು ಸರ್ಕಾರಕ್ಕೆ ಸಮುದ್ರಕ್ಕೆ ಹರಿಯುವ ಕಾವೇರಿ ನೀರನ್ನು ಬಳಸಲು ಅನುಮತಿ ಕೊಟ್ಟಿದ್ದಾರೆ. ಇದರಿಂದ ಸೇಲಂ ಜಿಲ್ಲೆಯ ಸುತ್ತಮುತ್ತ ಪ್ರದೇಶದ ನಾಲ್ಕು ಲಕ್ಷ ಹೆಕ್ಟೇರ್ಗೆ ನೀರು ಬಳಕೆ ಆಗುತ್ತದೆ. ಇದರಿಂದ ತಮಿಳುನಾಡಿನ ಎಐಎಡಿಎಂಕೆ ಪಕ್ಷಕ್ಕೆ ರಾಜಕೀಯ ಲಾಭ ಆಗಲಿದ್ದು, ಈ ವಿಚಾರವಾಗಿ ಪ್ರಧಾನಿಯವರಿಗೆ ಮೇಕೆದಾಟು ಯೊಜನೆಗೆ ಅನುಮತಿ ನೀಡಿ ಎಂದು ಪತ್ರ ಬರೆದಿದ್ದೆ ಈ ವಿಚಾರದಲ್ಲಿ ಇಲ್ಲಿವರೆಗೆ ಪ್ರತಿಕ್ರಿಯೆ ಬಂದಿಲ್ಲ ಮುಂಬರುವ ಸಂಸತ್ ಅಧಿವೇಶನದಲ್ಲಿ ಇದನ್ನು ರಾಜ್ಯ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಇದೆ ಸಂದರ್ಭದಲ್ಲಿ ಎಚ್ ಡಿ ದೇವೇಗೌಡರು ಹೇಳಿಕೆ ನೀಡಿದರು.
ಸಂವಿಧಾನಲ್ಲಿ ಸ್ಥಾನವಿಲ್ಲ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಮಾತನಾಡಿ ಎಕರೂಪ ನಾಗರಿಕತೆ ಅಸಾಧ್ಯ ಇದರಿಂದ ಬಿಜೆಪಿಗೆ ನಷ್ಟ ಆಗುತ್ತದೋ ಅಥವಾ ಬಿಡುತ್ತದೋ ಗೊತ್ತಿಲ್ಲ. ಆದರೆ, ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಇದನ್ನು ಜಾರಿ ಮಾಡಲು ಹೊರಟರೆ ವಿರೋಧ ವ್ಯಕ್ತವಾಗುತ್ತದೆ ಸಂವಿಧಾನದಲ್ಲಿ ಏನಿರುತ್ತದೋ ಅದಕ್ಕೆ ನಾವು ಬದ್ಧರಾಗಿರಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂಓದಿ: ಜೆಡಿಎಸ್ನ ಮೊದಲ ಪಟ್ಟಿ.. ಇದು ಶಾಶ್ವತ ಪಟ್ಟಿ ಅಲ್ಲ: ಎಚ್ ಡಿ ದೇವೇಗೌಡ