ETV Bharat / state

ಈಟಿವಿ ಭಾರತದ ಜೊತೆ ಸಂತಸ ಹಂಚಿಕೊಂಡ CET Topper ಮೇಘನ್ ಹೆಚ್​ ಕೆ

ಇಂದು ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಸುಮಾರು 5 ವಿಭಾಗಗಳಲ್ಲಿ ಮೊದಲ ರ್ಯಾಂಕ್ ಪಡೆದ ಮೈಸೂರಿನ ಮೇಘನ್ ತಮ್ಮ ಸಂತಸವನ್ನು 'ಈಟಿವಿ ಭಾರತ'ದೊಂದಿಗೆ ಹಂಚಿಕೊಂಡಿದ್ದಾರೆ.

author img

By

Published : Sep 20, 2021, 6:33 PM IST

Updated : Sep 20, 2021, 6:42 PM IST

Mysore Meghan
ಮೇಘನ್ ಹೆಚ್​ಕೆ

ಮೈಸೂರು: ಇಂದು ಸಿಇಟಿ(CET) ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, 5 ವಿಭಾಗಗಳಲ್ಲಿ ಱಂಕ್ ಪಡೆದ ಮೈಸೂರಿನ ಮೇಘನ್ ಹೆಚ್.ಕೆ. ತಮ್ಮ ಸಂತಸವನ್ನು 'ಈಟಿವಿ ಭಾರತ'ದೊಂದಿಗೆ ಹಂಚಿಕೊಂಡರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಮೇಘನ್​, ಕಳೆದ ಎರಡೂವರೆ ವರ್ಷದ ಶ್ರಮಕ್ಕೆ ಇಂದು ಫಲ ಸಿಕ್ಕಿದ್ದು, ತುಂಬಾ ಖುಷಿಯಾಗಿದೆ. ಪ್ರತಿದಿನ ವೇಳಾಪಟ್ಟಿ ಮಾಡಿಕೊಂಡು ದಿನ, ವಾರ ಹಾಗೂ ತಿಂಗಳ ಗುರಿಯನ್ನಿಟ್ಟುಕೊಂಡು ಎರಡೂವರೆ ವರ್ಷದಿಂದ ಶಿಸ್ತಿನಿಂದ ಹಂತ-ಹಂತವಾಗಿ ಓದಿಕೊಂಡು ಹೋದರೆ ಕಷ್ಟ ಏನಿಲ್ಲ ಎಂದು ತಮ್ಮ ಸಾಧನೆ ಹಿಂದಿನ ಶ್ರಮದ ಬಗ್ಗೆ ತಿಳಿಸಿದರು.

ವೈದ್ಯನಾಗುವ ಆಸೆ:

ನೀಟ್ ಪರೀಕ್ಷೆ ಬರೆದಿದ್ದು, ಅದರ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ವೈದ್ಯನಾಗುವ ಆಸೆ ಇದೆ. ಕೋವಿಡ್​ಗಿಂತ ಮೊದಲು ಆಫ್​​​ಲೈನ್ ಕ್ಲಾಸ್​ ಇತ್ತು. ಆನಂತರ ಆನ್​​​ಲೈನ್ ಆಗಿ ಬದಲಾಯಿತು. ಈ ಸಂದರ್ಭದಲ್ಲಿ ಶಿಸ್ತಿನಿಂದ ಓದಿದೆ. ನನ್ನ ತಂದೆ-ತಾಯಿ ಕೂಡ ಶಿಕ್ಷಕರಾಗಿದ್ದು, ಪಾಲಕರ ಸಹಕಾರ ನನಗೆ ತುಂಬಾ ಸಹಾಯವಾಯಿತು ಎಂದು ಮೇಘನ್​ ಹೇಳಿದರು.

ಈಟಿವಿ ಭಾರತದ ಜೊತೆ ಸಂತಸ ಹಂಚಿಕೊಂಡ ಮೇಘನ್ ಹೆಚ್​ಕೆ

ವಿದ್ಯಾರ್ಥಿಗಳು ಒಂದು ವೇಳಾಪಟ್ಟಿ ಹಾಗೂ ಗುರಿಯನ್ನು ಇಟ್ಟುಕೊಂಡು ವ್ಯಾಸಂಗ ಮಾಡಬೇಕು. ಬೇರೆಯವರ ಜೊತೆ ಸ್ಪರ್ಧೆ ಮಾಡುವುದಕ್ಕಿಂತ ನಮಗೆ ನಾವೇ ಸ್ಪರ್ಧೆ ಮಾಡಿಕೊಂಡು ಶಿಸ್ತನ್ನು ರೂಢಿಸಿಕೊಂಡರೆ ಖಂಡಿತ ಫಲ ಸಿಗುತ್ತದೆ ಎಂದು ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟರು.

ಇಂಜಿನಿಯರಿಂಗ್, ಕೃಷಿ, ಪಶು ಸಂಗೋಪನೆ, ಬಿ- ಫಾರ್ಮಾ ಹಾಗೂ ಯೋಗ ನ್ಯಾಚುರೋಪತಿ ಈ ಐದು ವಿಭಾಗಗಳಲ್ಲಿ ಮೇಘನ್. ಹೆಚ್.ಕೆ ಪ್ರಥಮ‌ ಱಂಕ್ ಗಳಿಸುವ ಮೂಲಕ ಮೈಸೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಹಾರೈಸೋಣ.

ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್ ಹೆಚ್.​​ಕೆ ರಾಜ್ಯಕ್ಕೆ ಫಸ್ಟ್- ರಿಸಲ್ಟ್‌ ಹೀಗೆ ಚೆಕ್‌ ಮಾಡಿ..

Last Updated : Sep 20, 2021, 6:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.