ಮೈಸೂರು: ಇಲ್ಲಿನ ಕಾರು ಚಿಕ್ಕಬಳ್ಳಾಪುರದಲ್ಲಿ ಸಿಕ್ಕಿದ್ದು, ಅದರ ಮಾಲೀಕ ಮಡಿಕೇರಿಯವರು. ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೇ ಮಾರಾಟವಾಗಿತ್ತು ಎಂದು ನಮಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಮುತ್ತುರಾಜ್ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ವಿಲಾಸಿ ಕಾರು ಮೈಸೂರಿನದ್ದು ಎಂಬ ಸುದ್ದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಅದರ ಮಾಲೀಕನನ್ನು ಹುಡುಕಿದಾಗ ಮಾಲೀಕ ಮಡಿಕೇರಿಯವರು. ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೇ ಮಾರಾಟ ಆಗಿತ್ತು ಎಂದು ಮಾಹಿತಿ ನಮಗೆ ಬಂದಿದೆ ಎಂದು ಡಿಸಿಪಿ ಸ್ಪಷ್ಟಪಡಿಸಿದರು.
ಇನ್ನು ಕಿಡಿಗೇಡಿಗಳು ಅಹಿತಕರ ಕೃತ್ಯಗಳನ್ನು ನಡೆಸಬಹುದು ಎಂಬ ಖಚಿತವಾದ ಮಾಹಿತಿ ಬಂದಿದ್ದು, ಅದಕ್ಕಾಗಿ ನಿನ್ನೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ ಮೈಸೂರಿನಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 10 ಕಡೆ ಚೆಕ್ ಪೋಸ್ಟ್ ನಿರ್ಮಿಸಿದ್ದೇವೆ. ನಗರದ ಹೋಟೆಲ್, ಲಾಡ್ಜ್ಗಳನ್ನು ಚೆಕ್ ಮಾಡಿದ್ದೇವೆ. ಅಲ್ಲದೆ ನಗರದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಆರ್.ಬಿ.ಐ, ಇನ್ಫೋಸಿಸ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳವನ್ನು ನಿಯೋಜನೆ ಮಾಡಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಲು ತಿಳಿಸಿದ್ದೇವೆ. 43 ಗರುಡ ವಾಹನಗಳು ರಾತ್ರಿಯಲ್ಲೂ ಸಂಚರಿಸುತ್ತವೆ. ಅನುಮಾನಸ್ಪದವಾಗಿ ವಾಹನಗಳು ನಿಂತಿದ್ದರೆ ಅವುಗಳನ್ನು ಪರಿಶೀಲನೆ ಮಾಡಲಾಗುವುದು. ಕೆ.ಎಸ್.ಆರ್.ಪಿ.ಯಿಂದ 4 ಬೆಟಾಲಿಯನ್ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜನೆ ಮಾಡಿದ್ದು, 12 ಸಿಟಿ ಆರ್ಮಿ ಫೋರ್ಸ್ಗಳನ್ನು ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.