ಮೈಸೂರು: ಮಣ್ಣಿನ ಸಿಂಗಲ್ ಯೂಸ್(ಏಕ ಬಳಕೆ) ಪ್ಲಾಸ್ಟಿಕ್ ಅನ್ನು ದೇಶಾದ್ಯಂತ ನಿಷೇಧಿಸಲಾಗಿದೆ. ಮಡಿಕೆಗಳು ಮರೆಯಾಗುವುದಿಲ್ಲ, ನಾವು ಪುನಃ ಮರಳಿ ಮಣ್ಣಿಗೆ ಬರಬೇಕೆಂದು ಮಹಿಳಾ ದಸರಾದ ಆವರಣದಲ್ಲಿ ಈಟಿವಿ ಭಾರತ್ ಜೊತೆಗೆ ಕಲಾವಿದ ಬಸವರಾಜಪ್ಪ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಹಿಂದೆ ಮಣ್ಣಿನ ಮಡಿಕೆಗಳು ಬದುಕಿನ ಭಾಗವವಾಗಿದ್ದವು. ಕೆಲ ಕಾಲ ನಂತರ ಬಂದ ಪ್ಲಾಸ್ಟಿಕ್, ಅಲ್ಯೂಮಿನಿಯಂ, ಸ್ಟೀಲ್ ವಸ್ತುಗಳಿಂದಾಗಿ ಮಣ್ಣಿನ ಮಡಿಕೆಗಳು ಇತಿಹಾಸ ಪುಟ ಸೇರಿದವು. ಈ ಮಣ್ಣಿನ ಮಡಿಕೆಗಳು ಇತಿಹಾಸ ಪುಟ ಸೇರಿದ್ದರೂ ಅದೇ ಮಣ್ಣಿನಲ್ಲಿ ಕಲಾಕೃತಿಗಳನ್ನು ಮಾಡಿ ಬಸವರಾಜಪ್ಪ ತಮ್ಮ ಜೀವನವನ್ನು ಹಸನು ಮಾಡಿಕೊಂಡಿದ್ದಾರೆ.
ಇನ್ನು ಇವರು, ಯುಗಪುರುಷ, ಮುತ್ತಿನ ಹಾರ, ಮಾಲ್ಗುಡಿ ಡೇಸ್, ಗುಬ್ಬಿ ಮತ್ತು ಇಯ್ಯಾಲ ಮುಂತಾದ ಸಿನಿಮಾಗಳಲ್ಲಿ ಕಲಾಕೃತಿಯ ಸೆಟ್ ಜೊತೆಗೆ ಹಲವಾರು ಪಾತ್ರಗಳನ್ನು ಮಾಡಿದ್ದಾರೆ ಅನ್ನೋದು ವಿಶೇಷ.