ಮೈಸೂರು : ಮೊದಲನೇ ಹಂತದ ಗ್ರಾಪಂ ಚುನಾವಣೆಗೆ 3,307 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 5 ತಾಲೂಕುಗಳ ಒಟ್ಟು 148 ಗ್ರಾಮ ಪಂಚಾಯತ್‌ನ 2,303 ಸ್ಥಾನಗಳಿಗೆ 3,307 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಹುಣಸೂರಿ-41 ಗ್ರಾಪಂಯ 595 ಸ್ಥಾನಗಳಿಗೆ 891 ಮಂದಿ, ಕೆ.ಆರ್.ನಗರದ 34 ಗ್ರಾಪಂಯ 562 ಸ್ಥಾನಗಳಿಗೆ 894 ಮಂದಿ, ಪಿರಿಯಾಪಟ್ಟಣದ 34 ಗ್ರಾಪಂಯ 549 ಸ್ಥಾನಗಳಿಗೆ 1,022 ಮಂದಿ, ಹೆಚ್.ಡಿ.ಕೋಟೆಯ 26 ಗ್ರಾಪಂಯ 407 ಸ್ಥಾನಗಳಿಗೆ 324 ಮಂದಿ ಹಾಗೂ ಸರಗೂರಿನ 13 ಗ್ರಾಪಂಯ 190 ಸ್ಥಾನಗಳಿಗೆ 176 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಮೊದಲನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿತ್ತು. ಐದು ತಾಲೂಕಗಳ ಮೊದಲನೇ ಹಂತದ 2,303 ಸ್ಥಾನಗಳಿಗೆ 3307 ಮಂದಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ.