ಮೈಸೂರು: ನಗರದ ಜ್ಯುವೆಲ್ಲರ್ಸ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿಯೊಬ್ಬ ಸುಮಾರು 2.80 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ರತ್ನಪುರಿ ಗ್ರಾಮದ ವಾಸಿ ಶಿವರಾಮ್ ವಿರುದ್ಧ ಕಳ್ಳತನದ ಆರೋಪ ಕೇಳಿ ಬಂದಿದೆ. ಈತ ಹುಣಸೂರು ಪಟ್ಟಣ ಜೆ.ಎಲ್. ಬಿ ರಸ್ತೆಯಲ್ಲಿರುವ ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ಕೌಂಟರ್ ಇನ್ಚಾರ್ಜ್ ಕೆಲಸ ಮಾಡಿಕೊಂಡಿದ್ದ. ಇವನಿಗೆ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು.
ಆದರೆ, ಜವಾಬ್ದಾರಿ ಮರೆತ ಆರೋಪಿ ಸುಮಾರು 2,80,00,000 ರೂ. ಬೆಲೆ ಬಾಳುವ ಒಟ್ಟು 616.813 ಗ್ರಾಂ ತೂಕದ ವಿವಿಧ ಬಗೆಯ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಜುವೆಲ್ಸ್ನ ಮ್ಯಾನೇಜರ್ ಸಂತೋಷ್ ಕುಮಾರ್ ಆರೋಪಿಸಿದ್ದಾರೆ. ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಓದಿ: ಕ್ರೈಂ ಕಡಿವಾಣಕ್ಕೆ ಹು-ಧಾ ಕಮೀಷನರೇಟ್ ಚಿಂತನೆ : 'ವಿಶೇಷ ಗಸ್ತು ಪಡೆ' ರಚೆನೆಗೆ ನಿರ್ಧಾರ..!