ETV Bharat / state

ಹುಚ್ಚನಾಯಿ ಹೊಡೆಯಲು ತಂಡ ರಚಿಸಿದ ಜಿಲ್ಲಾಡಳಿತ.. ಶ್ವಾನವನ್ನ ಕೊಂದ ಗ್ರಾಮಸ್ಥರು

ಕೆಲ ದಿನಗಳ ಹಿಂದೆ ಕೆ.ಆರ್.ಪೇಟೆ ಪಟ್ಟಣ, ಮಾಕವಳ್ಳಿ, ಪುರ ಗೇಟ್, ಕುಂದನಹಳ್ಳಿ, ಹೆಗ್ಗಡ ಹಳ್ಳಿ ಸೇರಿದಂತೆ ಹಲವೆಡೆ ಜನರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಸುಮಾರು 40ಕ್ಕೂಅಧಿಕ ಮಂದಿ ಗಾಯಗೊಂಡಿದ್ದರು. ಇದೀಗ ಗ್ರಾಮಸ್ಥರೇ ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.

Villagers killed a mad dog i
ಹುಚ್ಚುನಾಯಿಯನ್ನು ಹೊಡೆದು ಹಾಕಿದ ಗ್ರಾಮಸ್ಥರು
author img

By

Published : Oct 7, 2021, 4:45 PM IST

ಮಂಡ್ಯ: ಕೆಲ ದಿನಗಳಿಂದ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಚ್ಚು ನಾಯಿಯನ್ನು ಹರಿರಾಯನಹಳ್ಳಿ ಬಳಿ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಕೊಂದು ಹಾಕಿದ್ದಾರೆ.

ಇಂದು ಹರಿರಾಯನಹಳ್ಳಿ ಗ್ರಾಮದ ಬಳಿ ಪುಟ್ಟ ಬಾಲಕಿಯ ಮೇಲೆ ಹುಚ್ಚುನಾಯಿ ದಾಳಿ ಮಾಡಿತ್ತು. ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ನಾಯಿ ದಾಳಿಯಿಂದ ಬಾಲಕಿಯನ್ನು ರಕ್ಷಿಸಿದ್ದರು. ಬಳಿಕ ಕಲ್ಲು, ದೊಣ್ಣೆ ಹಿಡಿದು ಅಟ್ಟಾಡಿಸಿಕೊಂಡು ಹೋಗಿ ನಾಯಿ ಹೊಡೆದು ಕೊಂದು ಹಾಕಿದ್ದಾರೆ.

ಹುಚ್ಚುನಾಯಿ ಕಡಿತದಿಂದ ಸುಮಾರು 40 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದರಿಂದ ಎತ್ತೆಚ್ಚುಕೊಂಡಿದ್ದ ಜಿಲ್ಲಾಡಳಿತ ನಾಯಿ ಸೆರೆ ಹಿಡಿಯಲು ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿಯವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ಆದರೆ, ಗ್ರಾಮಸ್ಥರೇ ನಾಯಿಯನ್ನು ಹೊಡೆದು ಹಾಕಿದ್ದಾರೆ.

ಇದನ್ನೂ ಓದಿ: ಮಂಡ್ಯ: ಒಂದೇ ದಿನ 40ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.