ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲೆಗೆ 16 KL ಜೊತೆ 5 KL ಧರ್ಮಸ್ಥಳ ಸಂಘದಿಂದ ಬಂದಿದೆ ಎಂದು ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಖಾಲಿ ಸಿಲಿಂಡರ್ ಕೊರತೆ ಇತ್ತು. ಕೆಲ ದಿನಗಳ ಹಿಂದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ 100 ಸಿಲಿಂಡರ್ ಕೊಟ್ಟಿದ್ದಾರೆ. ಸರ್ಕಾರ 140 ಸಿಲಿಂಡರ್ ಕೊಟ್ಟಿದೆ. ಹೀಗಾಗಿ, ಪ್ರತಿದಿನ 400 ಸಿಲಿಂಡರ್ ಬರುತ್ತಿದೆ. ಆದ್ದರಿಂದ ಆಕ್ಸಿಜನ್ ಕೊರತೆ ಇಲ್ಲ ಎಂದರು.
ನಮ್ಮ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ನೀಡುತ್ತಿದೆ. ರೋಗಲಕ್ಷಣಗಳು ಕಂಡ ಬಂದ ತಕ್ಷಣವೇ ಆಸ್ಪತ್ರೆಗೆ ಬನ್ನಿ ಚಿಕಿತ್ಸೆ ಪಡೆಯಿರಿ. ಸರ್ಕಾರ ಒಳ್ಳೆಯ ಮಾತ್ರೆಗಳನ್ನ ನೀಡುತ್ತಿದೆ. ತೆಗೆದುಕೊಂಡರೆ ಬೇಗ ಗುಣಮುಖರಾಗುತ್ತೀರಿ ಎಂದು ಸಲಹೆ ನೀಡಿದರು.
ಮನೆಯಲ್ಲಿ ಯಾರು ಕೂಡ ಕ್ವಾರಂಟೈನ್ ಆಗಬೇಡಿ. ಇದರಿಂದ ಕುಟುಂಬಕ್ಕೂ ಹರಡುವಂತಹ ಸಂಭವ ಇದೆ. ಆದ್ದರಿಂದ ದಯವಿಟ್ಟು ಎಲ್ಲರೂ ಸಹ ಕಡ್ಡಾಯವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ ಎಂದು ಸಚಿವ ನಾರಾಯಣ ಗೌಡ ಮನವಿ ಮಾಡಿದರು.
ಮೃತ ಪತ್ರಕರ್ತರಿಗೆ ಶ್ರದ್ಧಾಂಜಲಿ ಹಾಗೂ ಚೆಕ್ ವಿತರಣೆ : ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಆವರಣದಲ್ಲಿ ಕೋವಿಡ್ನಿಂದ ಮೃತಪಟ್ಟ ಚಲುವರಾಜು, ವಾಸುದೇವರಾವ್ ಹಾಗೂ ಮಹದೇವ ಪ್ರಕಾಶ್ ಅವರಿಗೆ ಸಚಿವ ಕೆ.ಸಿ. ನಾರಾಯಣಗೌಡ ಶ್ರದ್ಧಾಂಜಲಿ ಸಲ್ಲಿಸಿದರು. ಮೃತ ಪತ್ರಕರ್ತರ ಕುಟುಂಬಕ್ಕೆ ಸಚಿವ ಕೆ.ಸಿ. ನಾರಾಯಣಗೌಡ ಪರಿಹಾರದ ಚೆಕ್ ವಿತರಣೆ ಮಾಡಿದರು.
ಪತ್ರಕರ್ತರು ಕೊರೊನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಸಹ ಫ್ರಂಟ್‌ಲೈನ್ ವಾರಿಯರ್ಸ್. ಎಲ್ಲರು ಸಹ ಕಡ್ಡಾಯವಾಗಿ ಮಾಸ್ಕ್ ಹಾಕಿ ಹಾಗೂ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.