ETV Bharat / state

ಬೂಕನಕೆರೆಯಲ್ಲಿ ಜೆಡಿಎಸ್​ ಪ್ರಚಾರ ಸಭೆ: ರೈತರ ಸಾಲ ಮನ್ನಾ ಕುರಿತು ಜನರಲ್ಲಿ ಅರಿವು

ಯಡಿಯೂರಪ್ಪ ತವರು ಗ್ರಾಮ ಬೂಕನಕೆರೆಯಲ್ಲಿ ಇಂದು ಜೆಡಿಎಸ್​ ಕಾರ್ಯಕರ್ತರು ಸಮಾವೇಶ ನಡೆಸಿ, ಜನರಿಗೆ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಆದ ಸಾಲ ಮನ್ನಾ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು.

ಜೆಡಿಎಸ್​​ಗೆ ಸಾಲ ಮನ್ನಾವೇ ಚುನಾವಣಾ ಅಸ್ತ್ರ
author img

By

Published : Oct 30, 2019, 7:24 PM IST

ಮಂಡ್ಯ: ಜೆಡಿಎಸ್​ಗೆ ಈಗ ಸಾಲ ಮನ್ನಾ ವಿಚಾರವೇ ಚುನಾವಣಾ ಅಸ್ತ್ರವಾಗಿದೆ. ಸಿಎಂ ಬಿಎಸ್​ವೈ ತವರು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಸಮಾವೇಶ ನಡೆಸಿ, ಕೆ.ಆರ್.ಪೇಟೆಯಲ್ಲಿ ಆಗಿರುವ ಸಾಲ ಮನ್ನಾದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಜೆಡಿಎಸ್​​ಗೆ ಸಾಲ ಮನ್ನಾವೇ ಚುನಾವಣಾ ಅಸ್ತ್ರ

ಕೆ.ಆರ್.ಪೇಟೆಯ ಬೂಕನಕೆರೆ ಸಿಎಂ ಯಡಿಯೂರಪ್ಪನವರ ತವರು ಗ್ರಾಮ. ಇಲ್ಲಿಂದಲೇ ಜೆಡಿಎಸ್ ಪ್ರಚಾರ ಸಭೆ ಆರಂಭ ಮಾಡಿದ್ದು, ಕುಮಾರಸ್ವಾಮಿ ಆಡಳಿತದ ಅವಧಿಯಲ್ಲಿ ಆದ ಸಾಲ ಮನ್ನಾ ಇಷ್ಟು ಎಂದು ಮಾಹಿತಿ ಹೊತ್ತ ಕಿರುಹೊತ್ತಿಗೆಯನ್ನು ಜನರಿಗೆ ಹಂಚಿಕೆ ಮಾಡುವುದಾಗಿ ಈ ಹಿಂದೆ ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದರು. ಹೀಗಾಗಿ ಇಂದಿನ ಈ ಸಭೆ ಕುತೂಹಲಕ್ಕೆ ಕಾರಣವಾಗಿತ್ತು.

ಕೆ.ಆರ್.ಪೇಟೆ ಕ್ಷೇತ್ರದಲ್ಲಿ 22 ಸಾವಿರ ರೈತರ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಸಾಲ ಮನ್ನಾ ಆಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸಭೆಯಲ್ಲಿ ಮಾಹಿತಿ ನೀಡಿದರು. ಅಲ್ಲದೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಜೆಡಿಎಸ್ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಮುಂದಿನ ಉಪ ಚುನಾವಣೆಯಲ್ಲಿ ಜೆಡಿಎಸ್​ಗೆ ಬೆಂಬಲ ನೀಡಬೇಕು. ಪಕ್ಷಾಂತರ ಮಾಡಿದ ಕೆ.ಸಿ.ನಾರಾಯಣಗೌಡರಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಇತ್ತೀಚೆಗಷ್ಟೇ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೂಕನಕೆರೆಯಿಂದಲೇ ಸಾಲ ಮನ್ನಾದ ಮಾಹಿತಿ ಪುಸ್ತಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಅವರು ಹೇಳಿಕೆಯಿಂದ ಹಿಂದೆ ಸರಿದು ಬೆಂಗಳೂರಿನತ್ತ ಪ್ರಯಾಣ ಮಾಡಿದ್ದರು. ಈಗ ಜೆಡಿಎಸ್ ಮುಖಂಡರು ಸಭೆ ಮಾಡಿ ಸಾಲ ಮನ್ನಾದ ಬಗ್ಗೆ ಮಾಹಿತಿ ನೀಡಿದ್ದಾರೆ.

Intro:ಮಂಡ್ಯ: ಜೆಡಿಎಸ್ ಗೆ ಈಗ ಸಾಲ ಮನ್ನಾವೇ ಪ್ರಮುಖ ಅಸ್ತ್ರವಾಗಿದೆ. ಸಿಎಂ ಯಡಿಯೂರಪ್ಪ ತವರು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಸಿ ಕೆ.ಆರ್.ಪೇಟೆಯಲ್ಲಿ ಆಗಿರುವ ಸಾಲ ಮನ್ನಾದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಕೆ.ಆರ್.ಪೇಟೆಯ ಬೂಕನಕೆರೆ ಸಿಎಂ ಯಡಿಯೂರಪ್ಪನವರ ತವರು ಗ್ರಾಮ. ಇಲ್ಲಿಂದಲೇ ಜೆಡಿಎಸ್ ಪ್ರಚಾರ ಸಭೆ ಆರಂಭ ಮಾಡಿದ್ದು, ಕುಮಾರಸ್ವಾಮಿ ಆಡಳಿತದ ಅವಧಿಯಲ್ಲಿ ಆದ ಸಾಲಮನ್ನಾ ಇಷ್ಟು ಎಂದು ಮಾಹಿತಿ ಕಿರುಹೊತ್ತಿಗೆಯನ್ನು ಜನರಿಗೆ ಹಂಚಿಕೆ ಮಾಡುವುದಾಗಿ ಈ ಹಿಂದೆ ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದರು. ಹೀಗಾಗಿ ಇಂದಿನ ಈ ಸಭೆ ಕುತೂಹಲಕ್ಕೆ ಕಾರಣವಾಗಿತ್ತು.
ಕ್ಷೇತ್ರದಲ್ಲಿ 22 ಸಾವಿರ ರೈತರ ಸುಆರು 100ಕೋಟಿ ರೂಪಾಯಿಗೂ ಹೆಚ್ಚು ಸಾಲ ಮನ್ನಾವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ಸಭೆಯಲ್ಲಿ ಮಾಹಿತಿ ನೀಡಿದರು. ಅಲ್ಲದೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಜೆಡಿಎಸ್ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡರು ಕ್ಷೇತ್ರದಲ್ಲಿ ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಮುಂದಿನ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡಬೇಕು, ಪಕ್ಷಾಂತರ ಮಾಡಿದ ಕೆ.ಸಿ. ನಾರಾಯಣಗೌಡರಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಇತ್ತೀಚೆಗಷ್ಟೇ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬೂಕನಕೆರೆಯಿಂದಲೇ ಸಾಲ ಮನ್ನಾದ ಮಾಹಿತಿ ಪುಸ್ತಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಅವರು ಹೇಳಿಕೆಯಿಂದ ಹಿಂದೆ ಸರಿದು ಬೆಂಗಳೂರಿನತ್ತ ಪ್ರಯಾಣ ಮಾಡಿದ್ದರು. ಈಗ ಜೆಡಿಎಸ್ ಮುಖಂಡರು ಸಭೆ ಮಾಡಿ ಸಾಲ ಮನ್ನಾದ ಭಾಷಣ ಮಾಡಿದ್ದಾರೆ.
Body:yathisha babu Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.