ಮಂಡ್ಯ: ರಸ್ತೆ ವಿಚಾರದಲ್ಲಿ ಸೋದರ ಸಂಬಂಧಿಗಳ ನಡುವೆ ಮಾರಮಾರಿ ನಡೆದು, ಮಗನ ಎದುರೇ ತಂದೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ತಾಲೂಕಿನ ಉರಮಾರಕಸಲಗೆರೆ ಗ್ರಾಮದಲ್ಲಿ ನಡೆದಿದೆ.
ಕೆಂಪೇಗೌಡ (40) ಹಲ್ಲೆಗೊಳಗಾದ ವ್ಯಕ್ತಿ, 12 ವರ್ಷದ ಮಗ ಅಕ್ಷಯ್ ಜೊತೆ ಬೈಕ್ನಲ್ಲಿ ಜಮೀನಿನಿಂದ ಮನೆಗೆ ತೆರಳುವಾಗ ಬೈಕ್ ಅಡ್ಡಗಟ್ಟಿ ಮನಬಂದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಹಲ್ಲೆ ಮಾಡಲಾಗಿದೆ.
ಗ್ರಾಮದ ದೇವೇಗೌಡ, ಸಚಿನ್, ಪುಟ್ಟಸ್ವಾಮಿ ಹಲ್ಲೆ ನಡೆಸಿರುವ ಆರೋಪಿಗಳು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕೃಷ್ಣೇಗೌಡರಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.