ETV Bharat / state

ಮಂಡ್ಯದ ಬೆಲ್ಲದಲ್ಲೂ ಅರಳಿದ ಗೌರಿ ಗಣೇಶ.. ಜನರಿಂದ ಭಾರಿ ಬೇಡಿಕೆ - ಬೆಲ್ಲದ ಗಣಪತಿಗೆ ಇದೀಗ ಬಾರಿ ಬೇಡಿಕೆ

ಮಂಡ್ಯದ ಬೆಲ್ಲಕ್ಕೆ ಇಡೀ ದೇಶದಲ್ಲಿ ಬೇಡಿಕೆ ಇದೆ. ಆದರೆ ಇದೀಗ ಮಾರುಕಟ್ಟೆಗೆ ಬೆಲ್ಲದ ಗಣಪತಿ ಕೂಡ ಕಾಲಿಟ್ಟಿದ್ದಾನೆ. ಮಂಡ್ಯ ತಾಲೂಕಿನ ಹಳುವಾಡಿ ಗ್ರಾಮದ ಆಲೆಮನೆಗಳ ಅಚ್ಚಿನಲ್ಲಿ ಬೆಲ್ಲದ ಪಾಕ ಹಾಕಿ ಗೌರಿ ಗಣೇಶನ ಮೂರ್ತಿಗಳನ್ನು ಸಿದ್ಧ ಮಾಡಲಾಗಿದೆ. ಈ ಬಾರಿ ಎರಡು ಸಾವಿರ ಗಣೇಶನ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಡಲಾಗಿದೆ.

Gauri Ganesha blossomed in Mandyas jaggery
ಬೆಲ್ಲದಲ್ಲಿ ಅರಳಿದ ಗೌರಿ ಗಣೇಶ
author img

By ETV Bharat Karnataka Team

Published : Sep 17, 2023, 9:39 PM IST

Updated : Sep 17, 2023, 10:53 PM IST

ಬೆಲ್ಲದಲ್ಲಿ ಗೌರಿಗಣೇಶ ತಯಾರಿಕೆ

ಮಂಡ್ಯ: ಗಣಪತಿ ಹಬ್ಬ ಇನ್ನೇನು ಬಂದೇ ಬಿಡ್ತು. ಗಣಪತಿ ಹಬ್ಬದಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ ಮಾರುಕಟ್ಟೆಯಲ್ಲೂ ಸಹ ಮಣ್ಣಿನ ಗಣಪ, ಪಿಒಪಿ ಗಣೇಶನ ಮೂರ್ತಿಗಳು ಮಾರಾಟಕ್ಕೆ ಸಜ್ಜಾಗಿವೆ. ಆದರೆ ಸಕ್ಕರೆ ನಗರಿ ಮಂಡ್ಯದಲ್ಲಿ ಎಲ್ಲಿಯೂ ಸಿಗದ ವಿಶೇಷ ಹಾಗೂ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳು ಬೆಲ್ಲದಲ್ಲಿ ತಯಾರಾಗಿದ್ದು, ಜನರ ಗಮನ ಸೆಳೆಯುತ್ತಿವೆ. ಹಾಗಾದ್ರೆ ಈ ಸ್ಟೋರಿ ನೋಡಿ.

ಹೌದು.. ಮಂಡ್ಯ ಅಂದ್ರೆ ವಿವಿಧ ಬಗೆಯ ಬೆಲ್ಲಕ್ಕೆ ಫೇಮಸ್. ಮಂಡ್ಯದ ಬೆಲ್ಲಕ್ಕೆ ಇಡೀ ದೇಶದಲ್ಲಿ ಬೇಡಿಕೆ ಇದೆ. ಆದರೆ ಇದೀಗ ಮಾರುಕಟ್ಟೆಗೆ ಬೆಲ್ಲದ ಗಣಪತಿ ಕೂಡ ಕಾಲಿಟ್ಟಿದ್ದಾನೆ. ಬೆಲ್ಲದ ಗಣಪತಿಗೆ ಬಾರಿ ಬೇಡಿಕೆ ಸಹ ಬಂದಿದೆ. ಸಕ್ಕರೆ ನಗರಿ ಮಂಡ್ಯದಲ್ಲಿ ಬೆಲ್ಲದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಸಹ ಮಾಡಲಾಗುತ್ತಿದೆ. ಅವು ಕೂಡ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳು. ಮಂಡ್ಯದಲ್ಲಿ ಸಾಕಷ್ಟು ಆಲೆಮನೆಗಳು ಇವೆ. ಅದೇ ರೀತಿ ಮಂಡ್ಯ ತಾಲೂಕಿನ ಹಳುವಾಡಿ ಗ್ರಾಮದ ಆಲೆಮನೆಗಳಲ್ಲಿ ಬೆಲ್ಲದ ಗೌರಿ ಹಾಗೂ ಗಣೇಶನ ಮೂರ್ತಿ ತಯಾರು ಮಾಡಲಾಗುತ್ತಿದೆ. ಹಚ್ಚಿನಲ್ಲಿ ಪಾಕವನ್ನು ಹಾಕಿ ಗೌರಿ ಹಾಗೂ ಗಣೇಶನ ಮೂರ್ತಿಗಳನ್ನ ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ. ಅರ್ಧ ಅಡಿಯಿಂದ ಎರಡೂವರೆ ಅಡಿಯವರೆಗೂ ಬೆಲ್ಲದ ಗಣೇಶನ ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ.

ಅಂದಹಾಗೆ ಮಂಡ್ಯ ಜಿಲ್ಲೆಯ ಸಾವಿರಾರು ಆಲೆಮನೆಗಳಲ್ಲಿ ವಿವಿಧ ಬಗೆಯ ಬೆಲ್ಲವನ್ನು ತಯಾರಿಸಿ ಮಾರಾಟ ಕೂಡ ಮಾಡಲಾಗುತ್ತದೆ. ಆದರೆ ಇದುವರೆಗೆ ಕೇವಲ ಬೆಲ್ಲವನ್ನು ಮಾತ್ರ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರೋ ವಿಕಸನ ಸಂಸ್ಥೆ ಆಲೆಮನೆ ಮಾಲೀಕರಿಗೆ ಉತ್ತೇಜನ ನೀಡಿ, ಬೆಲ್ಲದಿಂದ ಗಣೇಶನ ಮೂರ್ತಿಗಳನ್ನ ತಯಾರಿಸಲು ಸಹಕಾರ ನೀಡಿದೆ.

ಹೀಗಾಗಿ ಕಳೆದ ವರ್ಷದಿಂದ ಈ ರೀತಿಯ ಬೆಲ್ಲದ ಗಣೇಶ ಮೂರ್ತಿಗಳನ್ನು ತಯಾರು ಮಾಡಿ ಮಾರಲಾಗುತ್ತಿದೆ. ಕಳೆದ ಬಾರಿ ಒಂದೂ ಸಾವಿರ ಗಣೇಶನ ಮೂರ್ತಿಗಳನ್ನ ತಯಾರಿಸಿ ಮಾರಾಟ ಮಾಡಲಾಗಿತ್ತು. ಆದರೆ ಈ ವರ್ಷ ಎರಡು ಸಾವಿರ ಗಣೇಶನ ಮೂರ್ತಿಗಳನ್ನ ತಯಾರು ಮಾಡಲಾಗಿದೆ. ಹೀಗಾಗಿ ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧ ಕಡೆಗಳಿಂದ ಬೇಡಿಕೆ ಸಹಾ ಬರುತ್ತಿದೆ. ಇನ್ನು ಕೇವಲ ಗಣೇಶನ ಹಬ್ಬಕ್ಕೆ ಮಾತ್ರ ಗಣೇಶನ ಮೂರ್ತಿಗಳನ್ನ ತಯಾರು ಮಾಡದೇ ಬೇರೆ ದಿನಗಳಲ್ಲೂ ಬೆಲ್ಲದ ಗಣೇಶನ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಲು ತಯಾರಿ ನಡೆದಿದೆ.

ಒಟ್ಟಾರೆ ಗಣೇಶನ ಹಬ್ಬಕ್ಕೆಂದು ಬೆಲ್ಲದ ಗಣೇಶನ ಮೂರ್ತಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದೀಗ ಎಲ್ಲರ ಆಕರ್ಷಣೆಯ ಮೂರ್ತಿಯಾಗಿದೆ. ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ ಪರಿಸರ ಕಾಳಜಿ ಮೆರೆಯಲಿ ಅನ್ನೋದೆ ನಮ್ಮ ಆಶಯ.

ಇದನ್ನೂಓದಿ:ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಿಸಲು ಭರದ ಸಿದ್ಧತೆ: ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹೂವು, ಹಣ್ಣು, ತರಕಾರಿಗಳು..

Last Updated : Sep 17, 2023, 10:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.