ಮಂಡ್ಯ: ಕಾಲೇಜಿಗೆ ಸೇರುವ ವಿಚಾರದಲ್ಲಿ ತಂದೆಯೊಂದಿಗೆ ಮಗಳು ಮುನಿಸಿಕೊಂಡು ನೇಣಿಗೆ ಶರಣಾಗಿದ್ದಾಳೆ. ಇತ್ತ ಮಗಳ ಸಾವಿನ ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ.
ಓದಿ: ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ಹುಡುಗಿಯರೊಂದಿಗೆ ಅರೆನಗ್ನ ಡಾನ್ಸ್ ವಿಡಿಯೋ ಪತ್ತೆ!
ಬಾಂಧವ್ಯ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಗಳಾಗಿದ್ದು, ತಂದೆ ರಾಜು (65) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಂದೆ ರಾಜು ಜೊತೆಗೆ ಮಗಳು ಬಾಂಧವ್ಯ ಕಾಲೇಜಿಗೆ ಸೇರುವ ವಿಚಾರದಲ್ಲಿ ಮುನಿಸಿಕೊಂಡಿದ್ದಳು. ಬಳಿಕ ಬೆಳಗಿನ ಜಾವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ನೋಡಿದ ರಾಜು ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇದೀಗ ಒಂದೇ ಮನೆಯಲ್ಲಿ ಸಣ್ಣ ವಿಷಯಕ್ಕೆ ಮುನಿಸಿಕೊಂಡ ಪರಿಣಾಮ ಎರಡು ಜೀವ ಬಲಿಯಾಗಿರುವುದು ದುರಂತ ಅಂತ್ಯವಾಗಿದೆ.
ಸದ್ಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.