ಬೆಳಗಾವಿ: ಮಹಿಳಾ ಪಿಡಿಒಗಳ ಜೊತೆಗೆ ಅಸಭ್ಯ ವರ್ತನೆ ಹಾಗೂ ಮಾನಸಿಕ ಕಿರುಕುಳ ನೀಡುಲಾಗುತ್ತಿದೆ ಎಂದು ಆರೋಪಿಸಿ ಬೈಲಹೊಂಗಲ ತಾಪಂ ಇಒ ವಿರುದ್ಧ ದೂರು ನೀಡಲಾಗಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಜಿಪಂ ಸಿಇಓ ಡಾ.ರಾಜೇಂದ್ರ ಕೆ.ವಿ. ಅವರಿಗೆ ದೂರು ನೀಡಿದ್ದಾರೆ.
ಬೈಲಹೊಂಗಲ ತಾಪಂ ಇಒ ಸಮೀರ ಮುಲ್ಲಾ ಅವರು ಮಹಿಳಾ ಪಿಡಿಒಗಳೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದಾರೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇನ್ನು ಹಲವು ಗೌಪ್ಯ ವಿಚಾರಗಳಿರುವ ಬಗ್ಗೆ ಮಹಿಳಾ ಪಿಡಿಒಗಳು ನಮಗೆ ತಿಳಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.