ETV Bharat / state

ಆ್ಯಂಬುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸಿದ 108ರ ಸಿಬ್ಬಂದಿ; ತಾಯಿ-ಮಗು ಸುರಕ್ಷಿತ.. - ತಾಯಿ-ಮಗು ಸುರಕ್ಷಿತ

ಕಳೆದ ರಾತ್ರಿ ಬನ್ನೂರಿನಲ್ಲಿ ನಿಗಧಿತ ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ, ಅರಕೆರೆ 108ರ ಸಿಬ್ಬಂದಿಗೆ ಪ್ರಕರಣವನ್ನು ವಹಿಸಲಾಗಿತ್ತು. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹೆರಿಗೆ ಆಗಿದೆ.

Child born in an ambulance
ಆ್ಯಂಬುಲೆನ್ಸ್​ನಲ್ಲಿಯೇ ಹೆರಿಗೆ
author img

By

Published : May 1, 2020, 9:44 AM IST

ಮಂಡ್ಯ : 108ರ ಆ್ಯಂಬುಲೆನ್ಸ್ ಸಿಬ್ಬಂದಿಯೇ ಮಧ್ಯರಾತ್ರಿ ಆಸ್ಪತ್ರೆ ಮಾರ್ಗ ಮಧ್ಯೆ ಹೆರಿಗೆ ಮಾಡಿಸಿದ ಘಟನೆ ಮೈಸೂರು ಹೊರ ವಲಯದಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯ 108ರ ಸ್ಟಾಫ್​ನರ್ಸ್ ಹರೀಶ್ ಹಾಗೂ ಚಾಲಕ ಸಿದ್ದಪ್ಪ ಸಹಾಯದಿಂದ ಟಿ.ನರಸಿಪುರ ತಾಲೂಕಿನ ರಂಗನಾಥ ಹುಂಡಿ ಗ್ರಾಮದ ಚೈತ್ರ ಎಂಬ ಗರ್ಭಿಣಿಗೆ ಮಧ್ಯರಾತ್ರಿ 2ರ ಸಮಯದಲ್ಲಿ ಹೆರಿಗೆ ಮಾಡಿಸಿದ್ದಾರೆ. ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

Congratulations to 108  staff
ಆ್ಯಂಬುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸಿದ 108ರ ಸಿಬ್ಬಂದಿ..

ಕಳೆದ ರಾತ್ರಿ ಬನ್ನೂರಿನಲ್ಲಿ ನಿಗಧಿತ ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ, ಅರಕೆರೆ 108ರ ಸಿಬ್ಬಂದಿಗೆ ಪ್ರಕರಣವನ್ನು ವಹಿಸಲಾಗಿತ್ತು. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹೆರಿಗೆ ಆಗಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.