ಮಂಡ್ಯ : ಇತ್ತೀಚೆಗೆ ಉತ್ತರಕನ್ನಡಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಿಟಿ ರವಿ ಅವರು ಪ್ರತಿಕ್ರಿಯಿಸಿದ್ದು, 'ನಾನು ಹುಟ್ಟಿರೋದೇ ಮಾಂಸ ತಿನ್ನೋ ಜಾತಿಯಲ್ಲಿ. ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ ಎಂದು ಮಂಡ್ಯದಲ್ಲಿ ಸ್ಪಷ್ಟಪಡಿಸಿದ್ದಾರೆ.
ಭಟ್ಕಳಕ್ಕೆ ಹೋದಾಗ ನಾಗಬನ ನೋಡಲು ಕರೆದಿದ್ದರು. ಹೊಸದಾಗಿ ದೇವಾಲಯ ಕಟ್ಟಲಾಗಿತ್ತು. 45 ದಿನಗಳು ಓಪನ್ ಇರಲಿಲ್ಲ. ನಾಗಬನದ ಹೊರಾವರಣದಲ್ಲಿ ನಿಂತು ದರ್ಶನ ಪಡೆದಿದ್ದೇವೆ. ನನಗೆ ದೇವರ ಬಗ್ಗೆ ಶ್ರದ್ಧೆ ಇದೆ. ದೇವಾಲಯಕ್ಕೆ ನಾನ್ ವೆಜ್ ತಿಂದು ಹೋಗಿಲ್ಲ. ನಾನು ಹುಟ್ಟಿರುವುದೇ ಮಾಂಸ ತಿನ್ನೋ ಜಾತಿಯಲ್ಲಿ. ಆದರೆ, ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ ಎಂದರು.
ದೇವರ ಬಗ್ಗೆ ಶ್ರದ್ಧೆ ಇದೆ - ಸಿಟಿ ರವಿ: ಸುಮ್ಮನೆ ವಿವಾದ ಹುಟ್ಟು ಹಾಕಲು ಕೆಲವರು ಹೀಗೆ ಮಾಡ್ತಿದ್ದಾರೆ. ವ್ರತ, ಪೂಜೆಗಳನ್ನ ಆಚರಿಸುವವನು ನಾನು. ದೇವರ ಬಗ್ಗೆ ಶ್ರದ್ಧೆ ಇದೆ. ಮಾಂಸ ತಿನ್ನುತ್ತೇನೆ. ಹಾಗಂತ ತಿಂದು ದಾರ್ಷ್ಟ್ಯ ತೋರಿಸಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗ್ತೀನಿ. ಏನಿವಾಗ, ಯಾರು ಏನ್ ಮಾಡ್ತಾರೆ ಅನ್ನೋ ರೀತಿ ಹೇಳಲ್ಲ ಎಂದು ಕಿಡಿಕಾರಿದರು.
ಏನಿದು ವಿವಾದ: ಇತ್ತೀಚೆಗೆ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಬಾಡೂಟ ಸೇವಿಸಿ ಬಳಿಕ ಶಾಸಕರು ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಬಗ್ಗೆ, ಬಾಡೂಟ ಸೇವಿಸುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ : ನಾನು ಚುನಾವಣೆಗೆ ನಿಲ್ಲೋದಿಲ್ಲ, ಮತ್ತೆ ಸದನಕ್ಕೆ ಬರೋದಿಲ್ಲ: ಭಾವುಕರಾಗಿ ನುಡಿದ ಬಿಎಸ್ವೈ
ಎಲ್ಲೇ ನಿಲ್ಲು ಎಂದರೂ ಸ್ಪರ್ಧೆಗೆ ರೆಡಿ ಎಂದ ರವಿ: ಸಿಟಿ ರವಿ ಕ್ಷೇತ್ರ ಬದಲಾವಣೆಗೆ ಹೈಕಮಾಂಡ್ ಸೂಚನೆ ವಿಚಾರವಾಗಿ ಮಾತನಾಡಿ, ಪಕ್ಷದ ಕೆಲಸಕ್ಕೆ ನಾನು ಸದಾ ಸಿದ್ಧನಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ, ಸೂಚನೆ ಕೊಟ್ಟರೂ ಪಾಲಿಸಲು ಬದ್ಧ. ಮಂಡ್ಯ ಮಾತ್ರವಲ್ಲ, ಜಮ್ಮು-ಕಾಶ್ಮೀರದಲ್ಲಿ ಸ್ಪರ್ಧೆಗೂ ರೆಡಿ ಎಂದರು.
ಇದನ್ನೂ ಓದಿ : ಜೆಡಿಎಸ್ ಅವಹೇಳನ ಮಾಡಲು ಸುರ್ಜೆವಾಲಗೆ ನಾಚಿಕೆ ಆಗಬೇಕು: ಹೆಚ್‌ಡಿಕೆ
ಪಕ್ಷದ ನಿರ್ಣಯಗಳು ಕಿಚನ್ ಕ್ಯಾಬಿನೆಟ್‌ನಲ್ಲಿ ಆಗಲ್ಲ: ನಮ್ಮ ಪಕ್ಷದಲ್ಲೂ ಅಪ್ಪ-ಮಕ್ಕಳಿದ್ದಾರೆ. ಪಕ್ಷದ ನಿರ್ಣಯಗಳು ಕಿಚನ್ ಕ್ಯಾಬಿನೆಟ್‌ನಲ್ಲಿ ಆಗಲ್ಲ. ನಮ್ಮ ಪಕ್ಷದ ಸಿಎಂ, ರಾಜ್ಯ, ರಾಷ್ಟ್ರ ಅಧ್ಯಕ್ಷರ ಬದಲಾವಣೆ ವಿಚಾರ ಮನೆಯಲ್ಲಿ ತೀರ್ಮಾನ ಆಗಲ್ಲ. ಪಕ್ಷದ ಸಂಸದೀಯ ಮಂಡಳಿಯೊಳಗೆ ತೀರ್ಮಾನ ಆಗುತ್ತದೆ. ಪಕ್ಷದ ನಿರ್ಣಯಗಳು ಕಿಚನ್ ಕ್ಯಾಬಿನೆಟ್‌ನಲ್ಲಿ ಆಗಲ್ಲ. ಯಾರಿಗೆ ಟಿಕೆಟ್ ಕೊಡಬೇಕು, ಕೊಡಬಾರದು ಎಂಬ ತೀರ್ಮಾನ ಫ್ಯಾಮಿಲಿಯಲ್ಲಿ ಆಗಲ್ಲ ಎಂದು ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಸಿಟಿ ರವಿ ವ್ಯಂಗ್ಯವಾಡಿದ್ರು.
ಇದನ್ನೂ ಓದಿ : ಹಿಂದಿನ ಸರ್ಕಾರಗಳಿಗೆ ಟಿಪ್ಪು ಹೀರೋ: ಅಡ್ಡಂಡ ಕಾರ್ಯಪ್ಪ